ಹೈದರಾಬಾದಿನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಮೊದಲೇ ಟೆಸ್ಟ್ನಲ್ಲಿ 1ನೇ ದಿನದಂದೇ ಇಂಗ್ಲೆಂಡ್ ತಂಡವನ್ನು ಟೀಂ ಇಂಡಿಯಾ ಕೇವಲ 246 ರನ್ಗಳಿಗೆ ಆಲೌಟ್ ಮಾಡಿದೆ. ಇದಕ್ಕೆ ಕೌಂಟರ್ ಆಗಿ ಮೊದಲ ಇನ್ನಿಂಗ್ಸ್ ಶುರು ಮಾಡಿದ ಟೀಂ ಇಂಡಿಯಾ 360ಕ್ಕೂ ಹೆಚ್ಚು ರನ್ ಪೇರಿಸಿ 100ಕ್ಕೂ ಹೆಚ್ಚು ರನ್ಗಳ ಲೀಡ್ ಪಡೆದಿದೆ.
ಇನ್ನು, ಈ ಮಧ್ಯೆ ಮೊದಲ ದಿನ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವಾಗ ಅಚ್ಚರಿ ಘಟನೆಯೊಂದು ನಡೆದಿದೆ. ಪಂದ್ಯ ನಡೆಯುತ್ತಿರುವಾಗಲೇ ಏಕಾಏಕಿ ಮೈದಾನಕ್ಕೆ ನುಗ್ಗಿದ ವಿರಾಟ್ ಕೊಹ್ಲಿ ಅಭಿಮಾನಿಯೋರ್ವ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದಾನೆ.
ವಿರಾಟ್ ಕೊಹ್ಲಿ ಜೆರ್ಸಿ ಧರಿಸಿದ್ದ ಅಭಿಮಾನಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಕಡೆಯತ್ತ ಬರುತ್ತಿದ್ದಾಗ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ರೋಹಿತ್ ಶರ್ಮಾ ಕೂಡ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಕೊಹ್ಲಿ ಅಭಿಮಾನಿ ರೋಹಿತ್ ಶರ್ಮಾ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಖುಷಿಯಿಂದಲೇ ಮಾತಾಡಿಸಿ ಅಭಿಮಾನಿಯನ್ನು ಕಳುಹಿಸಿಕೊಟ್ಟಿದ್ದಾರೆ.