Saturday, January 25, 2025

ಮತ್ತೊಮ್ಮೆ ಲ್ಯಾಂಡ್ ಆದ ವಿಕ್ರಮ್..! ಮತ್ತೊಮ್ಮೆ ಜಿಗಿದು ಲ್ಯಾಂಡ್ ಆಗಿದ್ದು ಹೇಗೆ ಗೊತ್ತಾ.?

ಚಂದ್ರಯಾನ-3 ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲಾ ನಡೆಯುತ್ತಿದೆ.‌ ದಕ್ಷಿಣ ಧ್ರುವದಲ್ಲಿ ಕತ್ತು ಆವರಿಸಿದ್ದು ಪ್ರಜ್ಞಾನ್ ರೋವರ್ ನಿದ್ರಾವಸ್ಥೆಗೆ ಜಾರಿದೆ. ಈ ಬೆಳವಣಿಗೆ ಬೆನ್ನಲ್ಲೇ ವಿಕ್ರಮ್ ಮತ್ತೆ ಚಂದ್ರನ ಮೇಲೆ ಜಿಗಿದು ಇಳಿಯುವ ಪ್ರಯತ್ನ ಮಾಡಿ ಸಫಲವಾಗಿದೆ. ಮತ್ತೊಮ್ಮೆ ಲ್ಯಾಂಡ್ ಆದ ವೀಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ.

ಈ ಬಗ್ಗೆ ಎಕ್ಸ್ ನಲ್ಲಿ (ಹಳೆಯ ಟ್ವೀಟ್) ಪೋಸ್ಟ್ ಮಾಡಿದೆ ಇಸ್ರೋ. ಇದು ಯಶಸ್ವಿಯಾಗಿ ಹಾಪ್ ಪ್ರಯೋಗಕ್ಕೆ ಒಳಗಾಯಿತು ಎಂದಿದೆ.

ಆಜ್ಞೆಯ ಮೇರೆಗೆ, ಅದು ಎಂಜಿನ್ ಗಳನ್ನು ಸ್ಟಾರ್ಟ್ ಮಾಡಿ ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ತಿಳಿಸಿದೆ.

ಈ ‘ಕಿಕ್-ಸ್ಟಾರ್ಟ್’ ಭವಿಷ್ಯದ ಮಾದರಿ ಮರಳುವಿಕೆ ಮತ್ತು ಮಾನವ ಕಾರ್ಯಾಚರಣೆಗಳನ್ನು ಉತ್ತೇಜಿಸುತ್ತದೆ ಎಂದು ಇಸ್ರೋ ತಿಳಿಸಿದೆ.

ಎಲ್ಲಾ ವ್ಯವಸ್ಥೆಗಳು ನಾಮಮಾತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆರೋಗ್ಯಕರವಾಗಿವೆ. ನಿಯೋಜಿಸಲಾದ ರ್ಯಾಂಪ್, ಚಾಸ್ಟೆ ಮತ್ತು ಐಎಲ್‌ಎಸ್‌ಎಗಳನ್ನು ಹಿಂದಕ್ಕೆ ಮಡಚಿ ಪ್ರಯೋಗದ ನಂತರ ಯಶಸ್ವಿಯಾಗಿ ಮರು ನಿಯೋಜಿಸಲಾಯಿತು ಎಂದು ಹೇಳಿದೆ.

Related Articles

Latest Articles