Sunday, May 18, 2025

ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ಅದ್ಧೂರಿ ವರಮಹಾಲಕ್ಷ್ಮೀ ವ್ರತ

ವರಮಹಾಲಕ್ಷ್ಮಿ ವ್ರತವನ್ನ ನಾಡಿನೆಲ್ಲೆಡೆ ಆಚರಿಸಲಾಗಿದೆ. ಸಾಮಾನ್ಯ ಜನರ ಮನೆಯಲ್ಲಿ ಒಂದು ಸಂಭ್ರಮವಾದ್ರೆ ಸ್ಯಾಂಡಲ್‌ವುಡ್ ತಾರೆಯರು ಅದ್ಧೂರಿಯಾಗಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಅದರಲ್ಲೂ ರಾಧಿಕಾ ಕುಮಾರಸ್ವಾಮಿ ಅವರು ದೈವ ದೇವರುಗಳೆಂದರೆ ಭಯ ಭಕ್ತಿ. ಹಬ್ಬ ಹರಿದಿನಗಳಲ್ಲಿ ಪೂಜೆ ಪುನಸ್ಕಾರ ಮಾಡುತ್ತಾರೆ. ತಮ್ಮ ಮನೆಯಲ್ಲಿ ಮಾಡಿದ ವರಮಹಾಲಕ್ಷ್ಮಿ ವ್ರತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸ್ಪೆಷಲ್‌ ವಿಡಿಯೋ ಹಂಚಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ಶ್ರೀ ವರಮಹಾಲಕ್ಷ್ಮಿ ದೇವಿಯು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೀಡಿ ಕಾಪಾಡಲಿ. ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು ಕೋರಿದ್ದಾರೆ.

https://www.instagram.com/radhika_kumarswamy/?utm_source=ig_embed&ig_rid=2ea43bf5-21ad-48ae-a60a-1cdbab4a8bb9

ರಾಧಿಕಾ ಕುಮಾರಸ್ವಾಮಿ ಅವರ ವಿಡಿಯೋ ನೋಡಿದ ಫ್ಯಾನ್ಸ್ ಅಂತು ಫುಲ್ ಶಾಕ್‌ ಆಗಿದ್ದಾರೆ. ಗೋಲ್ಡನ್ ಬಣ್ಣದ ಸೀರೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಂಗೊಳಿಸುತ್ತಿದ್ದರೆ ಅಭಿಮಾನಿಗಳು ನಿಮಗೆ ವಯಸ್ಸು ಆಗೋದಿಲ್ವಾ ಸೌಂದರ್ಯಕ್ಕೆ ಮತ್ತೊಂದು ಹೆಸರೇ ನೀವು ಎಂದು ಕೊಂಡಾಡಿದ್ದಾರೆ. ಕೆಲವರು ತಮಾಷೆಯಾಗಿ ಕಾಲೆಳೆದಿದ್ದಾರೆ.

Related Articles

Latest Articles