Monday, September 16, 2024

ಮನೆಯವರ ವಿರೋಧದ ಮಧ್ಯೆಯೂ ಒಂದಾದ ಸಲಿಂಗಿ ಜೋಡಿ..! ದೇವಸ್ಥಾನದಲ್ಲಿ ಯುವತಿಯರಿಬ್ಬರ ಮದುವೆ

ಪಶ್ಚಿಮ ಬಂಗಾಳದ ಲೆಸ್ಬಿಯನ್ ಜೋಡಿ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಗಣ ಜಿಲ್ಲೆಯಿಂದ ಬಂದ ಜಯಶ್ರೀ ರಾಹುಲ್ (28) ಮತ್ತು ರಾಖಿ ದಾಸ್ (23) ಅವರು ಡಿಯೋರಿಯಾದ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದರು.ಇಲ್ಲಿ ಇಬ್ಬರಿಗೆ ಪರಸ್ಪರ ಪರಿಚಯವಾಗಿದ್ದು, ಪ್ರೀತಿಸಲು ಆರಂಭಿಸಿದ್ದಾರೆ.

ಎರಡೂ ಮನೆಯ ಸದಸ್ಯರು ಮದುವೆಗೆ ಒಪ್ಪಿಗೆ ಸೂಚಿಸದ ಕಾರಣ ಸಲಿಂಗಿ ಯುವತಿಯರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಇಬ್ಬರೂ ಮೊದಲು ತಮ್ಮ ಮದುವೆಗೆ ನೋಟರಿ ಪ್ರಮಾಣ ಪತ್ರವನ್ನು ಪಡೆದುಕೊಂಡರು, ನಂತರ ಸೋಮವಾರ ಡಿಯೋರಿಯಾದ ಭಟ್ಪರ್ ರಾಣಿಯ ಭಗದಾ ಭವಾನಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾದರು ಎಂದು ತಿಳಿದುಬಂದಿದೆ. ಆರ್ಕೆಸ್ಟಾದ ಮಾಲೀಕ ಮುನ್ನಾ ಪಾಲ್ ಅವರು ಮದುವೆಗೆ ನೋಟರೈಸ್ ಅಫಿಡವಿಟ್ ಪಡೆಯುವ ಮೂಲಕ ಮದುವೆಯನ್ನು ಔಪಚಾರಿಕಗೊಳಿಸಿದರು

ಕೆಲವು ದಿನಗಳ ಹಿಂದೆ ದೀರ್ಗೇಶ್ವರನಾಥ ದೇವಸ್ಥಾನದಲ್ಲಿ ಈ ಸಲಿಂಗಿ ಜೋಡಿ ಮದುವೆಯಾಗಲು ತೀರ್ಮಾನಿಸಿತ್ತು. ಆದ್ರೆ ಆ ದೇವಸ್ಥಾನದಲ್ಲಿ ಮದುವೆಗೆ ಅನುಮತಿ ನಿರಾಕರಿಸಲಾಗಿತ್ತು. ಇದರಿಂದ ನೊಂದ ದಂಪತಿಗಳು ತಮ್ಮ ಹಿತೈಷಿಗಳೊಂದಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡರು. ಮದುವೆಗೆ ನೋಟರಿ ಪ್ರಮಾಣ ಪತ್ರ ಪಡೆದು ಮಜೌಳಿರಾಜದ ಭಗದ ಭವಾನಿ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಮಾಲಾರ್ಪಣೆ ಮಾಡಿಕೊಂಡರು.

Related Articles

Latest Articles