Wednesday, February 19, 2025

Kstrc ಬಸ್ಸಿಗೆ ದ್ವಿಚಕ್ರ ವಾಹನ ಡಿಕ್ಕಿ; ತಾಯಿ ಮಗಳು ದುರ್ಮರಣ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿಯಲ್ಲಿ ಕೆಎಸ್‌ ಆರ್‌ ಟಿಸಿ ಬಸ್ಸಿನಡಿ ಸಿಲುಕಿ ತಾಯಿ- ಮಗಳು ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ. ಸವಿತಾ ರಾಜು ಆಚಾರಿ (40) ಹಾಗೂ ಅಂಕಿತಾ ರಾಜು ಆಚಾರಿ(17) ಮೃತ ರ್ದುದೈವಿಗಳು.

ಮಂಕಿ ಜಾತ್ರೆ ಪೇಟೆಗೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಳಗಾವಿಯತ್ತ ತೆರಳುತ್ತಿದ್ದ ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಕೂಡಲೇ ಭಟ್ಕಳದ ಸರಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ತಾಯಿ-ಮಗಳು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಹೊನ್ನಾವರ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles