Monday, September 16, 2024

ಅಯೋಧ್ಯಾ ರಾಮಮಂದಿರದಿಂದ ದೇಶಕ್ಕೆ ಕೀರ್ತಿ ಬರುವ ವಿಚಾರ ಆಗಲಿ; ಯುಟಿ ಖಾದರ್

ಜನವರಿ 22 ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಳ್ಳಲಿರುವ ಭವ್ಯವಾದ ಶ್ರೀರಾಮ ಮಂದಿರ ಕಾರ್ಯಕ್ರಮಕ್ಕೆ ವಿಧಾನ ಸಭಾ ಸಭಾಪತಿ ಯುಟಿ ಖಾದರ್ ಶುಭ ಹಾರೈಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಯೋಧ್ಯೆಯ ಭವ್ಯವಾದ ರಾಮಮಂದಿರದಿಂದ ನಮ್ಮ ದೇಶಕ್ಕೆ ಕೀರ್ತಿ ಬರುವ ವಿಚಾರ ಆಗಲಿ ಮತ್ತು ನಮ್ಮ ಸಮಾಜದ ಪ್ರತಿ ಗ್ರಾಮದಲ್ಲೂ ಸೌಹಾರ್ದತೆ, ಸೋದರತೆ, ಪ್ರೀತಿ ವಿಶ್ವಾಸ ನೆಲೆಗೊಳ್ಳಲು ಇದೊಂದು ಪ್ರೇರಣೆಯಾಗುವ ಕಾರ್ಯಕ್ರಮ ಆಗಲಿ.

ಈ ಕಾರ್ಯಕ್ರಮಕ್ಕೆ ಸಂತೋಷದಿಂದ ನಾನು ಶುಭಾಶಯ ಸಲ್ಲಿಸ್ತೇನೆ ಎಂದಿದ್ದಾರೆ. ಆಹ್ವಾನ ಬಂದ್ರೆ ಉದ್ಘಾಟನೆಗೆ ಹೋಗ್ತೀರಾ ಅನ್ನೊ‌ ಪ್ರಶ್ನೆಗೆ ಸಮಯಾವಕಾಶ, ಅವಕಾಶ ಸಿಕ್ಕಿದಂತಹ ಸಂದರ್ಭದಲ್ಲಿ ಎಲ್ಲರೂ ಕೂಡ ಹೋಗಬಹುದು, ಉದ್ಘಾಟನೆಗೆ ಹೋದರೆ ಅದರಲ್ಲಿ ತಪ್ಪಿಲ್ಲ ಎಂದ ಖಾದರ್ ನಮ್ಮ ಸಮಾಜ ಹಾಗೂ ದೇಶವನ್ನು ಒಗ್ಗಟ್ಟು ಮಾಡುವ ಸಮಾರಂಭ ಆಗಬೇಕು ಅಂತಾ ನಾನು ಹೇಳ ಬಯಸುತ್ತೇನೆ ಎಂದಿದ್ದಾರೆ.

Related Articles

Latest Articles