ದಕ್ಷಿಣ ಕನ್ನಡ: ಸ್ಪೀಕರ್ ಯು.ಟಿ.ಖಾದರ್ ಅವರು ತುಳುನಾಡಿನ ಕಾರ್ಣಿಕ ದೈವಗಳಾದ ಪಣೋಲಿಬೈಲು ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ಹರಕೆ ಕೋಲ ನೆರೆವೇರಿಸಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕ್ಷೇತ್ರದ ಕಲ್ಲುರ್ಟಿ -ಕಲ್ಕುಡ ದೈವಗಳಿಗೆ ಹರಕೆ ಹೊತ್ತಿದ್ದ ಯು.ಟಿ.ಖಾದರ್ ಅವರು ಕ್ಷೇತ್ರಕ್ಕೆ ಆಗಮಿಸಿ ಹರಕೆಯನ್ನು ಸಲ್ಲಿಸಿದ್ದಾರೆ.
ಕೋಲ ಆರಂಭದಿಂದ ಕೊನೆಯವರೆಗೂ ಇದ್ದ ಯು.ಟಿ.ಖಾದರ್ ದೈವಗಳ ಎಲ್ಲಾ ಸೇವೆಯಲ್ಲಿ ಭಾಗಿಯಾಗಿ ದೈವಗಳ ಆಶೀರ್ವಾದ ಪಡೆದಿದ್ದಾರೆ. ಯು.ಟಿ.ಖಾದರ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.
ದೈವಗಳ ಹರಕೆಕೋಲ ನೆರವೇರಿಸಿದ ಯು.ಟಿ ಖಾದರ್‌ಗೆ ಮುಸ್ಲಿಂ ಮುಖಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬವರು ವಿರೋಧಿಸಿದ್ದು, ಯು.ಟಿ ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಉಳ್ಳಾಲದ ಶಾಸಕರಾಗಿರುವ ಖಾದರ್ ಅವರು ಸರ್ವಧರ್ಮೀಯರ ಅಚ್ಚುಮೆಚ್ಚಿನ ನಾಯಕರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.