ಉಪ್ಪಿನಂಗಡಿ: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಟ್ಲ ನಿವಾಸಿ ಸತೀಶ್ (38) ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
- ಹೂವಿನ ಲೋಕದ ಅಪ್ಸರೆ ಪೆಟೂನಿಯಾ..! ಆರೈಕೆ ಹೇಗೆ?
- ಕಣ್ಮರೆಯಾಗಿದ್ದ ಅಣಬೆ ತಳಿಗೆ ಮರುಜೀವ! ಅಂತಾರಾಷ್ಟ್ರೀಯ ಜರ್ನಲ್ನಲ್ಲೂ ದಾಖಲಾಯ್ತು ಪುತ್ತೂರು ಕೃಷಿಕನ ಅಪೂರ್ವ ಸಾಧನೆ
- ಕಾಸರಗೋಡಿನ ಭತ್ತದ ಕೃಷಿಕ ಸತ್ಯನಾರಾಯಣ ಬೇಲೇರಿ ಅವರಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ
- ಮೊಟ್ಟ ಮೊದಲ ಬಾರಿಗೆ ಸಸ್ಯಗಳು ಪರಸ್ಪರ ಮಾತನಾಡುವ ವಿಡಿಯೋ ಸೆರೆಹಿಡಿದ ವಿಜ್ಞಾನಿಗಳು!
- ದಕ್ಷಿಣ ಕನ್ನಡ: ಜಾನುವಾರು ವಿಮೆ ಯೋಜನೆ: ಶೇ. 70ರಷ್ಟು ಸಹಾಯಧನ
- ಅಡಿಕೆ ಸಿಪ್ಪೆಯಲ್ಲಿದೆ ಅಗಾಧ ಶಕ್ತಿ..! ಕೃಷಿಯಲ್ಲಿ ಬಳಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ
ನೆಲ್ಯಾಡಿ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಜೂ.14 ರಂದು ಪುತ್ತೂರಿನಲ್ಲಿ ಪರಿಚಯಿಸಿಕೊಂಡ ಆರೋಪಿಯು ಫೋನ್ ಮೂಲಕ ಸಂಪರ್ಕ ಸಾಧಿಸಿಕೊಂಡು ಆತ್ಮೀಯತೆ ಬೆಳೆಸಿದ್ದ. ಕಳೆದ ಜು. 21 ರಂದು ಆಕೆಯನ್ನು ನೆಲ್ಯಾಡಿಗೆ ಬರಲು ಹೇಳಿ, ನೆಲ್ಯಾಡಿಗೆ ಬಂದ ಆಕೆಯನ್ನು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಡುವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಈ ವಿಚಾರವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.