ಯಮಸ್ವರೂಪಿಯಾಗಿ ಬಂದ ಟಯರ್ ಓರ್ವನನ್ನು ಬಲಿಪಡೆದ ಘಟನೆ ನಡೆದಿದೆ. ತ್ರಿಶೂರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಗಾಚಕರ ಸಿಗ್ನಲ್ ಜಂಕ್ಷನ್ ಬಳಿ ಚಲಿಸುತ್ತಿದ್ದ ಕಂಟೈನರ್ ಲಾರಿಯ ಚಕ್ರಗಳು ಏಕಾಏಕಿ ಕಳಚಿ ದುರಂತ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಕುನ್ನಂಕುಳಂ ಚಿಚುಟ್ಟಿಯ ಪುತನಂಗಡಿ ಪುಲಿಕೋಟ್ ನಿವಾಸಿ ಹೆಬಿನ್ (45) ಎನ್ನಲಾಗಿದೆ.
ಹೆಬಿನ್ ಅವರು ರಸ್ತೆ ಬದಿಯ ತಾತ್ಕಾಲಿಕ ಫಾಸ್ಟ್‌ಟ್ಯಾಗ್ ಕೌಂಟರ್‌ನ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಏ. 4 ರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.
ಲಾರಿ ಕೊಯಮತ್ತೂರಿನಿಂದ ಎರ್ನಾಕುಲಂ ಕಡೆಗೆ ಹೋಗುತ್ತಿತ್ತು. ಎಡ ಹಿಂಬದಿಯ ಎರಡು ಚಕ್ರಗಳು ಕಳಚಿ ಬಂದು ಕೌಂಟರ್‌ಗೆ ಅಪ್ಪಳಿಸಿದೆ. ಈ ವೇಳೆ ಹೆಬಿನ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ಕೂಡಲೇ ಅಲ್ಲಿದ್ದವರು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಾರೆ.