ಸಾಮಾನ್ಯವಾಗಿ ಶಾಲೆಯಲ್ಲಿ ಒಂದೆರಡು ಅವಳಿ ಜೋಡಿ ಮಕ್ಕಳನ್ನು ನೋಡಿರುತ್ತೀರಾ. ಆದರೆ ಕಡಲ ನಗರಿ ಮಂಗಳೂರಿನಲ್ಲಿ ಹದಿನೇಳು ಜೋಡಿ ಅವಳಿ ಮಕ್ಕಳಿರುವ ಶಾಲೆಯೊಂದು ವಿಶೇಷತೆಗೆ ಸಾಕ್ಷಿಯಾಗಿದೆ.
With input from oneindia
ನಗರ ಹೊರವಲಯದ ಕೈರಂಗಳ ಪುಣ್ಯಕೋಟಿ ನಗರದಲ್ಲಿರುವ ಶಾರದಾ ಗಣಪತಿ ವಿದ್ಯಾಕೇಂದ್ರ. ಎಲ್.ಕೆ.ಜಿ ಯಿಂದ ಹಿಡಿದು ಪಿಯಸಿ ತನಕ ತರಗತಿಗಳಿರುವ ಈ ಶಾಲೆ ಇದೀಗ ದಾಖಲೆಯ ಅವಳಿ ಜೋಡಿ ಮಕ್ಕಳ ಮೂಲಕ ಸುದ್ದಿಯಾಗಿದೆ. ಈ ಶಾಲೆಯಲ್ಲಿ 17 ಅವಳಿ ಮಕ್ಕಳ ಜೋಡಿಗಳಿವೆ.
ಎಸ್‌ಎಸ್‌ಎಲ್‌ಸಿಯಲ್ಲಿ ಒಂದು ಜೋಡಿ, 9ನೇ ತರಗತಿಯಲ್ಲಿ ಮೂರು ಜೋಡಿ, 8ನೇ ತರಗತಿಯಲ್ಲಿ ಒಂದು ಜೋಡಿ, 7ನೇ ತರಗತಿಯಲ್ಲಿ ಎರಡು ಜೋಡಿ, 6ನೇ ತರಗತಿಯಲ್ಲಿ ಮೂರು ಜೋಡಿ, 2ನೇ ತರಗತಿಯಲ್ಲಿ ಎರಡು ಜೋಡಿ, 1ನೇ ತರಗತಿಯಲ್ಲಿ ಒಂದು ಜೋಡಿ, ಯುಕೆಜಿಯಲ್ಲಿ ಮೂರು ಜೋಡಿ, ಎಲ್ ಕೆಜಿಯಲ್ಲಿ ಒಂದು ಜೋಡಿ ಅವಳಿ ಮಕ್ಕಳಿದ್ದಾರೆ.
ಈ ಮಕ್ಕಳ ಪೈಕಿ ಆರು ಜೋಡಿ ಹೆಣ್ಣು, ಆರು ಜೋಡಿ ಗಂಡು ಮತ್ತು ಐದು ಜೋಡಿ ಹೆಣ್ಣು-ಗಂಡು ಅವಳಿ ಮಕ್ಕಳಿದ್ದಾರೆ. ಈ ಮಕ್ಕಳು ರಜೆ ಮುಗಿಸಿ ಶಾಲೆಗೆ ಬಂದಾಗ ಇವರನ್ನು ಗುರುತಿಸುವುದಕ್ಕೂ ಶಿಕ್ಷಕರು ಗೊಂದಲ ಆಗುತ್ತಿದ್ದಾರೆ.
ಈ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 12 ಜೋಡಿ ಅವಳಿ ಮಕ್ಕಳಿದ್ದರು. ಈ ಬಾರಿ ಈ ಅವಳಿ ಜೋಡಿ ಮಕ್ಕಳ ಸಂಖ್ಯೆ 17ಕ್ಕೆ ಏರಿದೆ. ಈ ದಾಖಲೆ ಸಂಖ್ಯೆಯ ಅವಳಿ ಜೋಡಿ ಮಕ್ಕಳಿಂದ ಹಾಸ್ಯಮಯ ಸಂಗತಿಗಳು ಸಹ ಆಗಾಗ ಶಾಲೆಯಲ್ಲಿ ನಡೆಯುತ್ತದೆ.