ವಾಷಿಂಗ್ಟನ್: ಅಮೆರಿಕದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥ ಸ್ಥಾನಕ್ಕೆ ತುಳಸಿ ಗಬಾರ್ಡ್ ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ. ಟ್ರಂಪ್ 2ನೇ ಅವಧಿಯ ಅಧ್ಯಕ್ಷೀಯ ಅವಧಿಯಲ್ಲಿ ಸರಕಾರದ ಪ್ರಮುಖ ಹುದ್ದೆಗೆ ಹಿಂದೂ ಸಮುದಾಯಕ್ಕೆ ಸೇರಿದ ಮೊದಲ ಮಹಿಳೆಗೆ ಅಗ್ರಸ್ಥಾನ ಸಿಕ್ಕಿದಂತಾಗಿದೆ.
ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿದ್ದ ಇತ್ತೀಚೆಗಷ್ಟೇ ನಿಯೋಜಿತ ಅಧ್ಯಕ್ಷರಿಗೆ ತಮ್ಮ ಬೆಂಬಲ ಘೋಷಿಸಿದ್ದರು. ಅವರ ನೇರ ನಿಯಂತ್ರಣದಲ್ಲಿ ಅಮೆರಿಕದ 18 ಗುಪ್ತಚರ ಸಂಸ್ಥೆಗಳು ಕಾರ್ಯವೆಸಗಲಿವೆ. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ಯಾರಿದು ತುಳಸಿ?
1981 ಎ.12ರಂದು ಅಮೆ ರಿಕ ದಲ್ಲಿ ಜನಿಸಿದ ತುಳಸಿ ಗಬಾರ್ಡ್ ತಾಯಿ ಕಾರೊಲ್ ಪೋರ್ಟರ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಹೀಗಾಗಿ ಅವರ ಹೆಸರಲ್ಲೂ ಬದಲಾವಣೆ ಆಯಿತು.
ಸೇನೆಯಲ್ಲಿ 2 ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದರು. 2012ರಲ್ಲಿ ಅಮೆರಿಕ ಸಂಸತ್‌ಗೆ ಆಯ್ಕೆಯಾದರು. ಇಂಥ ಗೌರವಕ್ಕೆ ಪಾತ್ರರಾದ ಅಮೆರಿಕದಲ್ಲಿರುವ ಮೊದಲ ಹಿಂದೂ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಭಗವದ್ಗೀತೆ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದರು.