Saturday, January 25, 2025

ಕಾಂಗ್ರೆಸ್ ನಾಯಕನ ವಾಟ್ಸಾಪ್‌ ವಿಡಿಯೋ ಕಾಲ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆತ್ತಲೆ ಮಹಿಳೆ; ಹಣಕ್ಕೆ ಬೇಡಿಕೆಯಿಟ್ಟ ಕಿಡಿಗೇಡಿಗಳು – ಎಫ್‌ಐಆರ್ ದಾಖಲು

ಬೆಂಗಳೂರು: ತಮಿಳುನಾಡು ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಉದ್ಯಮಿ ಮಹಿಳೆಯೊಬ್ಬರು ನಗ್ನ ಪೋಸ್ ನೀಡಿದ ವಿಡಿಯೋ ಕರೆಯನ್ನು ಸ್ವೀಕರಿಸಿದ್ದು ಇದೀಗ ಕಟಂಕವಾಗಿ ಪರಿಣಮಿಸಿದೆ. ಇದಾದ ನಂತರ ಉದ್ಯಮಿಗೆ ಹಣ ಕೊಡುವಂತೆ ನಿರಂತರ ಕರೆ ಮಾಡಿ ಒತ್ತಾಯಿಸಿದ್ದು, ನೊಂದ ವ್ಯಕ್ತಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ರಂಗರಾಜನ್ ಮೋಹನ್ ಕುಮಾರಮಂಗಲಂ ಅವರು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ ಮತ್ತು ತಮಿಳುನಾಡು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.

ಹಳೆ ವಿಮಾನ ನಿಲ್ದಾಣ ರಸ್ತೆಯ ಕೋಡಿಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಆರಂಭದಲ್ಲಿ ಕಿಡಿಗೇಡಿಗಳ ಬೇಡಿಕೆಗೆ ಮಣಿದು 6000 ರೂ ಕೊಟ್ಟಿದ್ದಾರೆ‌.

ಆದರೆ, ಸುಲಿಗೆಕೋರರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಪೊಲೀಸರ ನೆರವು ಕೋರಿದ್ದಾರೆ. ನವೆಂಬರ್ 11 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ರಾಜಕಾರಣಿ-ಉದ್ಯಮಿ ಅವರು ಹಿಂದಿನ ದಿನ ಅನಿರೀಕ್ಷಿತವಾಗಿ ವಾಟ್ಸಾಪ್ ವೀಡಿಯೊ ಕರೆಯನ್ನು ಸ್ವೀಕರಿಸಿದ್ದಾಗಿ ವಿವರಿಸಿದ್ದಾರೆ. ಕರೆ ಸಂಪರ್ಕಗೊಂಡಿದೆ ಎಂದು ತಿಳಿಯಲಿಲ್ಲ. ಆದರೆ ಶಬ್ದಗಳನ್ನು ಕೇಳಿದ ನಂತರವೇ ನನಗೆ ಕಾಲ್ ಕನೆಕ್ಟ್ ಗೊಂಡಿದೆ ಎಂಬ ಅರಿವಾಗಿದೆ. ಕರೆಯನ್ನು ತ್ವರಿತವಾಗಿ ಕೊನೆಗೊಳಿಸುವ ಮೊದಲು ಮೊಬೈಲ್ ಪರದೆಯಲ್ಲಿ ನಗ್ನ ಮಹಿಳೆಯನ್ನು ಕಂಡುಹಿಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ‌.

ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಅಪರಾಧಿಗಳು ಕುಮಾರಮಂಗಲಂ ಅವರ ಫೋಟೋಗಳನ್ನು ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ನಿಂದ ಪಡೆದುಕೊಂಡಿದ್ದಾರೆ. ದುಷ್ಕರ್ಮಿಗಳು ಜಾರ್ಖಂಡ್‌ನ ಜಮ್ತಾರಾದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ.

Related Articles

Latest Articles