ಹುಲಿವೇಷ ಹಾಕಿಕೊಂಡು ಕುಣಿಯುತ್ತಿರುವಾಗಲೇ ಹುಲಿವೇಷಧಾರಿಯೊಬ್ಬ ಆಯತಪ್ಪಿ ಬಿದ್ದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ. ಇದು ದೇವಿ ಶಕ್ತಿಯ ಪವಾಡ ಎಂದೂ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ.
ಮಂಗಳಾದೇವಿಯ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಹುಲಿವೇಷ ತಂಡದ ಹುಲಿವೇಷಧಾರಿ ಶಂಕರ್ ಎಂಬ ಯುವಕ ಹರಕೆಯ ಹಿನ್ನೆಲೆ ಶ್ರೀ ಮಂಗಳಾದೇವಿ ದೇವಸ್ಥಾನದ ಎದುರು ಹುಲಿವೇಷ ಹಾಕಿಕೊಂಡು ಕುಣಿಯುತ್ತಿದ್ದರು.
ಈ ವೇಳೆ ಜಿಮ್ನ್ಯಾಸ್ಟಿಕ್ ಮಾಡುತ್ತಿದ್ದರು. ಈ ವೇಳೆ ಅವರು ರಿವರ್ಸ್ ಪಲ್ಟಿ ಹೊಡೆಯುತ್ತಿದ್ದಾಗ ಆಯತಪ್ಪಿ ತಲೆ ನೆಲಕ್ಕೆ ಬಡಿದಿದಿದೆ.
ತಲೆ ನೆಲಕ್ಕೆ ಬಡಿದ ಪರಿಣಾಮ ಹುಲಿವೇಷಧಾರಿ ಶಂಕರ್ ಕತ್ತು ಉಳುಕಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣ ಗಾಯದೊಂದಿಗೆ ಅಪಾಯದಿಂದ ಯುವಕ ಶಂಕರ್ ಪಾರಾಗಿದ್ದಾರೆ. ಅವರು ಆಯತಪ್ಪಿ ಬೀಳುತ್ತಿರುವ ವೀಡಿಯೋ ವೈರಲ್ ಆಗಿ ದೊಡ್ಡ ಏಟಾಗಿದೆ ಎಂದು ಪ್ರಚಾರವಾಗಿತ್ತು. ಈ ಹಿನ್ನೆಲೆಯಲ್ಲಿ ಶಂಕರ್ ಅವರೇ ವೀಡಿಯೋ ಮಾಡಿ ನನಗೆ ಏನು ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.