ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ಕದ್ದು ಶೋಕಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನ ಕದಿಯುವ ಸ್ಟೈಲ್ ಬೇರೆಯೇ. ಈ ಕಳ್ಳ ಹೈ-ಫೈ ಕಾರ್ನಲ್ಲಿ ಡಿಸೇಂಟ್ ಅಗಿ ಬಂದು ಎಳನೀರು ಕದ್ದು ಎಸ್ಕೇಪ್ ಆಗುತ್ತಿದ್ದ. ಆದರೆ ಆನೆ ಕದ್ದರು ಕಳ್ಳ ಅಡಿಕೆ ಕದ್ದರು ಕಳ್ಳನೆ. ಈಗ ಈ ಸೀಯಾಳ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ.
ಮೋಹನ್ ಕಾರಿನಲ್ಲಿ ಬಂದು ಎಳೆನೀರು ಕದಿಯುತ್ತಿದ್ದ ಕಳ್ಳ. ಗಿರಿನಗರ, ಹನುಮಂತ ನಗರ ಠಾಣೆ ವ್ಯಾಪ್ತಿಯಲ್ಲಿ ಈತ ಕಳ್ಳತನ ಮಾಡುತ್ತಿದ್ದ. ಕದ್ದ ಎಳೆನೀರನ್ನು ಅದೇ ಏರಿಯಾದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತಿದ್ದ. ಸದ್ಯ ಮೋಹನ್ನನ್ನು ಗಿರಿನಗರ ಬಂಧಿಸಿದ್ದಾರೆ.
ಮೋಹನ್ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ. ಮೋಹನ್ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ. ಗಿರಿನಗರದ ಮಂಕುತಿಮ್ಮ ಪಾರ್ಕ್ ಬಳಿ ವ್ಯಾಗನರ್ ಕಾರ್ನಲ್ಲಿ ಬಂದು ಎಳೆನೀರು ಕದ್ದು ಪರಾರಿಯಾಗಿದ್ದನು.
ಮೋಹನ್ ಪ್ರತಿ ದಿನ ಸಿಕ್ಕ ಸಿಕ್ಕ ಕಡೆ ಎಳೆನೀರು ಕದಿಯುತಿದ್ದನು. ಸದ್ಯ ಆರೋಪಿ ಮೋಹನ್ನನ್ನು ಬಂಧಿಸಲಾಗಿದೆ. ಆತನ ಬಳಿಯಿಂದ 8.5 ಲಕ್ಷ ಬೆಲೆ ಬಾಳುವ ಒಂದು ವ್ಯಾಗನರ್ ಕಾರ್, ಬುಲೆಟ್ ಬೈಕ್ ಹಾಗೂ 90 ಎಳೆನೀರು ವಶಕ್ಕೆ ಪಡೆಯಲಾಗಿದೆ.