ಉಡುಪಿ: ಕಾರ್ಮಿಕನ ಮೈಮೇಲೆ ಪ್ರೇತ ಬಂದು ಸಹೋದ್ಯೋಗಿಗಳ ಮೇಲೆ ದಾಳಿ ಮಾಡಿದೆ ಎನ್ನಲಾದ ಘಟನೆ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ.
ಬಿಹಾರ ಮೂಲದ ಕಾರ್ಮಿಕರು ಮೀನು ಕಟ್ಟಿಂಗ್ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ 11 ಗಂಟೆ ಸುಮಾರಿಗೆ ಕಾರ್ಮಿಕನ ಮೈಮೇಲೆ ಏಕಾಏಕಿ ಪ್ರೇತಾತ್ಮದ ಆವೇಶ ಆಗಿದೆಯಂತೆ. ಪ್ರೇತಾತ್ಮ ಆವೇಶವಾಗುತ್ತಿದ್ದಂತೆ ಆತ ಎಲ್ಲರನ್ನೂ ಮನಬಂದಂತೆ ಥಳಿಸಿದ್ದಾನೆ. ಇದನ್ನು ನೋಡಿದ ಕಾರ್ಮಿಕರೆಲ್ಲರೂ ಆತಂಕಕ್ಕೆ ಒಳಗಾಗಿ ಎದ್ದುಬಿದ್ದು ಓಡಿ ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಡ್ರಾಮ ಮಾಡಿದ ಯುವಕರು..!
ಅಸ್ಸಾಂ ಮೂಲದ 8 ಕಾರ್ಮಿಕರು ಮೀನು ಕಟ್ಟಿಂಗ್ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಊರಿಗೆ ಹೋಗಬೇಕು ಎಂದು ಮಾಲೀಕರಿಗೆ ರಜೆ ಕೇಳಿದ್ದಾರೆ. ಆಗ ರಜೆಗೆ ನಿರಾಕರಿಸಿದ್ದಕ್ಕೆ ಮೈಮೇಲೆ ದೆವ್ವ ಬಂದ ಹಾಗೇ ಡ್ರಾಮ ಮಾಡಿದ್ದಾರೆ ಎನ್ನಲಾಗಿದೆ. ಫ್ಯಾಕ್ಟರಿಯಲ್ಲಿರುವ ಇತರೆ ಕಾರ್ಮಿಕರಿಂದ ಈ ನಾಟಕದ ವಿಚಾರ ಬೆಳಕಿಗೆ ಬಂದಿದೆ. 8 ಕಾರ್ಮಿಕರು ಸೇರಿ ಮಾಡಿದ ಡ್ರಾಮ ಇದಾಗಿದೆ.
ಈ ಘಟನೆ ಕುರಿತಂತೆ ಮಾತಾಡಿದ ಎಸ್ಎಸ್ಫಿಶ್ ಕಟ್ಟಿಂಗ್ನ ಹಿರಿಯ ಕಾರ್ಮಿಕ ಇಸ್ರಫಿಲ್ ಮುಲ್ಲಾ, ನಾನು ಇಲ್ಲಿ ಕಳೆದ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ದೆವ್ವ ಪಿಶಾಚಿ ಯಾವುದು ನನ್ನ ಅನುಭವಕ್ಕೆ ಬಂದಿಲ್ಲ. ಕಂಪನಿ ಬಿಟ್ಟು ಹೋಗಲು ಅವರು ಈ ನಾಟಕ ಮಾಡಿದ್ದಾರೆ. ಎರಡು ದಿನದ ಹಿಂದಿನ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ. ಈ ಘಟನೆ ಆದ ದಿನ ನಾನು ಸೈಟ್ನಲ್ಲಿಯೇ ಇದ್ದೆ. ನನ್ನ ಕಣ್ಣ ಮುಂದೆಯೇ ಅವರು ಕಿರುಚಾಡಿ ಓಡಿ ಹೋಗಿದ್ದಾರೆ. ಆ ಹುಡುಗರಿಗೆ ಇಲ್ಲಿ ಕೆಲಸ ಮಾಡಲು ಮನಸ್ಸಿರಲಿಲ್ಲ. ದೆವ್ವ ಎಂದು ಕಥೆ ಕಟ್ಟಿ ಕಂಪನಿ ಬಿಟ್ಟು ಹೋಗುವ ಪ್ಲಾನ್ ಮಾಡಿದ್ದಾರೆ ಎಂದಿದ್ದಾರೆ.