ಟಾಟಾ ಐಪಿಎಲ್ ೨೦೨೫ ಅಂತಿಮಘಟ್ಟದತ್ತ ಹೆಜ್ಜೆ ಇಟ್ಟಿದೆ. ಆದರೆ ಪ್ಲೇ-ಆಫ್ಗೆ ಯಾವೆಲ್ಲ ತಂಡಗಳು ಪ್ರವೇಶಿಸುತ್ತವೆ ಅನ್ನುವುದು ಕುತೂಹಲ ಮೂಡಿಸಿದೆ. ಯಾಕೆಂದರೆ ಪ್ಲೇ-ಆಫ್ಗಾಗಿ ತಂಡಗಳ ಪೈಪೋಟಿ ತೀವ್ರವಿದೆ.
ಸದ್ಯದ ಅಂಕಪಟ್ಟಿ ಪೈಕಿ, 11 ಪಂದ್ಯಗಳಲ್ಲಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿ ಅಗ್ರಸ್ಥಾನದಲ್ಲಿದೆ. ಆರ್ಸಿಬಿ ಸದ್ಯಕ್ಕೆ ಪ್ಲೇ-ಆಫ್ ರೇಸ್ನಲ್ಲಿ ಸುರಕ್ಷಿತವಾಗಿದೆ. ಆದರೆ ಇನ್ನುಳಿದ ಮೂರು ತಂಡಗಳ ಆಯ್ಕೆಗೆ ಭಾರೀ ಪೈಪೋಟಿ ಇದೆ.

ಐದನೇ ಸ್ಥಾನದಲ್ಲಿ ಕೂತಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ Panjab Kings ಲಕ್ನೋ ತಂಡವನ್ನು (ಎಲ್ಎಸ್ಜಿ) ಸೋಲಿಸಿ ನಂಬರ್ 2ನೇ ಸ್ಥಾನಕ್ಕೇರಿದೆ. ಆ ಮೂಲಕ ಎರಡನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಅದೇ ರೀತಿ, ಮೂರನೇ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್, ನಾಲ್ಕನೇ ಸ್ಥಾನಕ್ಕೆ ಕುಸಿದೆ.
ಆರ್ಸಿಬಿ, ಗುಜರಾತ್, ಮುಂಬೈ ಇಂಡಿಯನ್ಸ್, ಪಂಜಾಬ್ ತಂಡಗಳ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಐದನೇ ಸ್ಥಾನದಲ್ಲಿದ್ದುಕೊಂಡು ಹೋರಾಟ ನಡೆಸ್ತಿದೆ. ಆರು ಪಂದ್ಯವನ್ನು ಗೆದ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಒಂದು ಪಂದ್ಯಾಟ ಬಾಕಿ ಇವೆ.
ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ನಡೆಯಲಿದೆ. ಇವತ್ತಿನ ಪಂದ್ಯವನ್ನು ಗೆದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಜಂಪ್ ಆಗಲಿದೆ.
ಡೆಲ್ಲಿ ಜೊತೆಗೆ ಕೋಲ್ಕತ್ತ ನೈಟ್ ರೈಡರ್ಸ್ ಕೂಡ ಪ್ಲೇ-ಆಫ್ ರೇಸ್ನಲ್ಲಿದ್ದು, ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಎಲ್ಎಸ್ಜಿ 7ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ 8, ಸನ್ ರೈಸರ್ಸ್ ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನದಲ್ಲಿದೆ.