Monday, December 9, 2024

ವಾರದ ಮಧ್ಯದಲ್ಲಿ ನಡೆಯಿತು ಎಲಿಮಿನೇಷನ್; ಬಿಗ್ ಬಾಸ್​ನಿಂದ ತನಿಷಾ ಕುಪ್ಪಂಡ ಔಟ್

ಈ ವಾರ ತನಿಷಾ ಕುಪ್ಪಂಡ, ಕಾರ್ತಿಕ್, ವರ್ತೂರು ಸಂತೋಷ್, ಪ್ರತಾಪ್, ವಿನಯ್, ನಮ್ರತಾ ನಾಮಿನೇಟ್ ಆಗಿದ್ದರು. ತುಕಾಲಿ ಸಂತೋಷ್ ಹಾಗೂ ಸಂಗೀತಾ ನಾಮಿನೇಷನ್​ನಿಂದ ಬಚಾವ್ ಆಗಿದ್ದರು. ಈಗ ದೊಡ್ಮನೆಯಿಂದ ಹೊರ ಹೋಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ, ಈ ವಾರ ಡಬಲ್ ಎಲಿಮಿನೇಷನ್, ಮುಂದಿನ ವಾರದ ಮಧ್ಯದಲ್ಲಿ ಒಂದು ಎಲಿಮಿನೇಷನ್ ನಡೆಯಬಹುದ ಎಂದು ಎಲ್ಲರೂ ಭಾವಿಸಿದ್ದರು. ಈಗ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದಾರೆ. ಈ ವಾರದ ಮಧ್ಯವೇ ಒಂದು ಎಲಿಮಿನೇಷನ್ ನಡೆದಿದೆ. ಪ್ರಮುಖ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ (Bigg Boss) ಮನೆಯಲ್ಲಿ ಈಗ ಉಳಿದುಕೊಂಡಿದ್ದು ಏಳು ಮಂದಿ ಮಾತ್ರ. ಇವರಲ್ಲಿ ಐವರು ಫಿನಾಲೆ ತಲುಪಲಿದ್ದಾರೆ.

ಬಿಗ್ ಬಾಸ್ ಮನೆ ಆರಂಭದಲ್ಲಿ ತುಂಬಿತ್ತು. ಆ ಬಳಿಕ ಒಬ್ಬೊಬ್ಬರೇ ಎಲಿಮಿನೇಟ್ ಆಗುತ್ತಾ ಬಂದರು. ನಂತರ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಬಂದವರು, ಬಂದಷ್ಟೇ ವೇಗದಲ್ಲಿ ಹೊರ ಹೋದರು. ಎಲಿಮಿನೇಟ್ ಆದ ಹಲವು ಸ್ಪರ್ಧಿಗಳು ದೊಡ್ಮನೆಗೆ ಬಂದಿದ್ದಾರೆ. ಅವರು ಸಂಭ್ರಮದಿಂದ ಕಾಲ ಕಳೆದಿದ್ದಾರೆ. ಒಂದು ದಿನ ಇದ್ದು ಅವರು ದೊಡ್ಮನೆಯಿಂದ ಹೋಗಿದ್ದಾರೆ. ಇದಾದ ಬಳಿಕವೇ ಎಲಿಮಿನೇಷನ್ ನಡೆದಿದೆ.

ಈ ವಾರ ತನಿಷಾ ಕುಪ್ಪಂಡ, ವರ್ತೂರು ಸಂತೋಷ್, ಕಾರ್ತಿಕ್, ಪ್ರತಾಪ್, ವಿನಯ್, ನಮ್ರತಾ ನಾಮಿನೇಟ್ ಆಗಿದ್ದರು. ಸಂಗೀತಾ ಹಾಗೂ ತುಕಾಲಿ ಸಂತೋಷ್ ನಾಮಿನೇಷನ್​ನಿಂದ ಬಚಾವ್ ಆಗಿದ್ದರು. ಈ ಪೈಕಿ ತನಿಷಾ ವಾರದ ಮಧ್ಯೆ ಔಟ್ ಆಗಿದ್ದಾರೆ. ಇಂದು ಈ ಎಪಿಸೋಡ್ ಪ್ರಸಾರ ಕಾಣಲಿದೆ. ಅದಕ್ಕಿಂತಲೂ ಮುಂಚೆ‌ ಕಲರ್ಸ್ ಕನ್ನಡ ಪ್ರೊಮೊ ಬಿಡುಗಡೆ ಮಾಡಿದ್ದು ತನಿಷಾ ಅವರನ್ನು ಬಿಗ್ ಬಾಸ್ ಬಾಗಿಲ ಬಳಿ ಬರಲು ಹೇಳಿ ಮನೆಗೆ ಕಳುಹಿಸಿದ್ದಾರೆ. ತನಿಷಾ ಕುಪ್ಪಂಡ ಅವರು ಆರಂಭದಲ್ಲಿ ಸಖತ್ ಫೈಟ್ ನೀಡಿದ್ದರು. ಆ ಬಳಿಕ ಅವರ ಕಾಲಿಗೆ ಏಟಾಯಿತು. ಇದಾದ ಬಳಿಕ ಅವರು ಡಲ್ ಆಗುತ್ತಾ ಬಂದರು.

ಇತ್ತೀಚೆಗೆ ತನಿಷಾ ಅವರು ಅಂದುಕೊಂಡ ರೀತಿಯಲ್ಲಿ ಆಟ ಪ್ರದರ್ಶನ ನೀಡಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಕಪ್ ಎತ್ತಬೇಕು ಎನ್ನುವ ಅವರ ಕನಸು ನುಚ್ಚು ನೂರಾಗಿದೆ. ಫಿನಾಲೆ ಸಮೀಪದಲ್ಲೇ ಅವರು ಎಡವಿದ್ದಾರೆ.

Related Articles

Latest Articles