Monday, December 9, 2024

ಓದಲು ಹೋಗಿ ಪ್ರೀತಿಯಲ್ಲಿ ಬಿದ್ದ ಯುವಕ.. ಭಾರತೀಯ ಸಂಪ್ರದಾಯದಂತೆ ಫ್ರಾನ್ಸ್ ಯುವತಿ ಜೊತೆ ಮದುವೆ

ಯುವಕನೊಬ್ಬ ಉನ್ನತ ವ್ಯಾಸಂಗಕ್ಕಾಗಿ ದೇಶ ತೊರೆದು ಫ್ರಾನ್ಸ್ ಹೋಗಿ ಅಲ್ಲಿನ ಯುವತಿಯನ್ನ ಪ್ರೀತಿಸಿ, ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ತಮಿಳುನಾಡಿನ ತೇನಿ ಜಿಲ್ಲೆಯ ಮುತ್ತುದೇವನೆಪಟ್ಟಿ ಹಳ್ಳಿಗೆ ಸೇರಿದ ಭೋಜನ್ ಹಾಗೂ ಕಾಳಿಯಮ್ಮ ಎನ್ನುವರ ಮಗ ಕಳೈರಾಜನ್ ಎನ್ನುವ ಯುವಕ ಫ್ರಾನ್ಸ್​ ಯುವತಿಯನ್ನ ವಿವಾಹವಾಗಿದ್ದಾರೆ.

ಕಳೈರಾಜನ್ ಅವರಿಗೆ ತಂದೆ ಇಲ್ಲ, ಆದರೂ ಉನ್ನತ ವ್ಯಾಸಂಗ ಮಾಡುವುದಕ್ಕಾಗಿ 2017ರಲ್ಲಿ ಫ್ರಾನ್ಸ್​ಗೆ ಹೋಗಿದ್ದರು. ಅಲ್ಲಿ ಪ್ರೆಂಚ್​ ಯುವತಿ ಮ್ಯಾರಿಯನ್​ ಎನ್ನುವ ಯುವತಿ ಜೊತೆ ಸ್ನೇಹ ಬೆಳೆದು ನಂತರ ಪ್ರೀತಿಯಾಗಿ ಮಾರ್ಪಟ್ಟಿದೆ.

ಈ ಬಗ್ಗೆ ಎರಡು ಕುಟುಂಬಕ್ಕೆ ವಿಷಯ ಗೊತ್ತಾಗಿ ಕಳೆದ ಮೇನಲ್ಲಿ ಫ್ರಾನ್ಸ್​ನಲ್ಲೇ ಕ್ರಿಶ್ಚಿಯನ್ ಪದ್ಧತಿಯಂತೆ ಮದುವೆ ಮಾಡಲಾಗಿತ್ತು. ಆದರೆ ಭಾರತದ ಸಂಪ್ರದಾಯದಂತೆ ಮದುವೆಯಾಗಬೇಕು ಎನ್ನುವುದು ಯುವತಿಯ ಆಸೆ ಆಗಿತ್ತು. ಅದರಂತೆ ತಮಿಳುನಾಡಿನ ತೇನಿ ಜಿಲ್ಲೆಯ ಸಮೀಪದ ವೀರಪಾಂಡಿಯಲ್ಲಿ ತಮಿಳು ಸಂಪ್ರದಾಯದಂತೆ ಮದುವೆಯಾಗಿ ಖುಷಿ ಪಟ್ಟಿದ್ದಾರೆ. ಈ ವೇಳೆ ಯುವತಿಯ ಕುಟುಂಬಸ್ಥರೆಲ್ಲ ಸಮಾರಂಭದಲ್ಲಿ ಭಾಗಿಯಾಗಿದ್ದರು.

Related Articles

Latest Articles