Monday, September 16, 2024

ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಸೇರ್ಪಡೆ ಬಹುತೇಕ ಖಚಿತ..! ನೇರಪ್ರಸಾರದಿಂದಲೇ 1526 ಕೋಟಿ ರೂ ಆದಾಯ ನಿರೀಕ್ಷೆ

2028ರಲ್ಲಿ ಅಮೆರಿಕದ ಲಾಸ್​ ಏಂಜಲಿಸ್​ನಲ್ಲಿ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಆಟ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ ಸಂಟನಾ ಸಮಿತಿ, ಈಗಾಗಲೆ ಕ್ರಿಕೆಟ್​ ಜತೆಗೆ ಫ್ಲ್ಯಾಗ್​ ಫುಟ್​ಬಾಲ್​, ಬೇಸ್​ಬಾಲ್​ ಮತ್ತು ಸಾಫ್ಟ್​​ಬಾಲ್​ ಕ್ರೀಡೆಗಳನ್ನು ಹೊಸದಾಗಿ ಒಲಿಂಪಿಕ್ಸ್​ಗೆ ಸೇರ್ಪಡೆಗೊಳಿಸಲು ಈಗಾಗಲೆ ನಿರ್ಧರಿಸಲಾಗಿದೆ‌. 24 ಗಂಟೆಗಳಲ್ಲಿ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಬ್ರಿಟನ್​ನ ‘ದಿ ಗಾರ್ಡಿಯನ್​’ ಪತ್ರಿಕೆ ವರದಿ ಮಾಡಿದೆ.

ಆಯೋಗವು ಮುಂದಿನ ಭಾನುವಾರದಿಂದ ಮುಂಬೈನಲ್ಲಿ ನಡೆಯಲಿರುವ 141ನೇ ಐಒಸಿ ಸಭೆಯಲ್ಲೂ ಈ ವಿಷಯವನ್ನು ತಿಳಿಸಲಿದೆ ಎನ್ನಲಾಗಿದೆ. ಕ್ರಿಕೆಟ್​ ಈ ಮುನ್ನ 1990ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಸ್ಪರ್ಧೆಯಾಗಿತ್ತು ಮತ್ತು ಆಗ ಇಂಗ್ಲೆಂಡ್​-ಫ್ರಾನ್ಸ್​ ಪುರುಷರ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿತ್ತು. ಆದರೆ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಕ್ರಿಕೆಟ್​ ವಿಭಾಗದಲ್ಲಿ ಹಲವು ತಂಡಗಳು ಭಾಗವಹಿಸಲಿವೆ.

ಕ್ರಿಕೆಟ್​ ಹೆಚ್ಚಿನ ಜನಪ್ರಿಯತೆ ಹೊಂದಿರುವ ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ ಆಯೋಜಕರು, ಇದರಿಂದಾಗಿ ನೇರಪ್ರಸಾರ ಹಕ್ಕಿನಿಂದ 1,526 ಕೋಟಿ ರೂ. ಹೆಚ್ಚುವರಿ ಆದಾಯ ಬರುವ ಲೆಕ್ಕಾಚಾರ ಹೊಂದಿದ್ದಾರೆ.

Related Articles

Latest Articles