ರಾಮಕೃಷ್ಣ ಮಿಷನ್ ನ ಸ್ವಾಮಿ ಸ್ಮರಣಾನಂದ (95) ಮಾ. 26 ರಂದು ಇಹಲೋಕ ತ್ಯಜಿಸಿದ್ದಾರೆ. 2017 ರಲ್ಲಿ ರಾಮಕೃಷ್ಣ ಮಿಷನ್ ಗೆ 16 ನೇ ಅಧ್ಯಕ್ಷರಾಗಿ ಸ್ಮರಣಾನಂದ ನಿಯುಕ್ತರಾಗಿದ್ದರು.
ಶ್ರೀಮದ್ ಸ್ವಾಮಿ ಸ್ಮರಣಾನಂದ ಜಿ ಮಹಾರಾಜರು, ಅಧ್ಯಕ್ಷರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ರಾತ್ರಿ 8:14 ರ ವೇಳೆಗೆ ಮಹಾಸಮಾಧಿ ಹೊಂದಿದ್ದಾರೆ ಎಂದು ಮಠ ಹೇಳಿಕೆಯಲ್ಲಿ ತಿಳಿಸಿದೆ.
ಸ್ಮರಣಾನಂದ ಸ್ವಾಮಿ ಅವರನ್ನು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಕ್ಕೆ ಜ.29 ರಂದು ದಾಖಲಿಸಲಾಗಿತ್ತು, ಮೂತ್ರನಾಳದ ಸೋಂಕಿನಿಂದ ಅವರು ಬಳಲುತ್ತಿದ್ದರು. ನಂತರ ಅವರಿಗೆ ಉಸಿರಾಟದ ವೈಫಲ್ಯ ಎದುರಾಗಿತ್ತು. ಅದಕ್ಕಾಗಿ ಅವರನ್ನು ಮಾರ್ಚ್ 3 ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.
ಇವರ ಅಗಲುವಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.