ದಕ್ಷಿಣ ಕನ್ನಡ: ಸುರತ್ಕಲ್ ನ ಮರವೂರು ರೈಲ್ವೇ ಸೇತುವೆಯ ಕೆಳಗೆ ಈಜಲು ತೆರಳಿದ್ದ ವೇಳೆ ಯುವಕ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಮೂಲತಃ ಕುಳೂರು ಶಾಂತಿಗುಡ್ಡೆ ನಿವಾಸಿ ಸದ್ಯ ಸುರತ್ಕಲ್ ಕೃಷ್ಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಾಕಿರ್ ಎಂದು ಗುರುತಿಸಲಾಗಿದೆ. ಇವರು ಸಿಟಿ ಬಸ್ ನಲ್ಲಿ ಕಂಡೆಕ್ಟರ್ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಶಾಕಿರ್ ಮರವೂರಿನ ರೈಲ್ವೇ ಸೇತುವೆಯ ಕೆಳ ಭಾಗದಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಸದ್ಯ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿಯ ಸಹಕಾರ ಪಡೆದು ಮೃತದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ.
ಘಟನಾ ಸ್ಥಳಕ್ಕೆ ಕಾವೂರು ಪೊಲೀಸರು ಭೇಟಿ ನೀಡಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
with input from e samaya