Sunday, December 8, 2024

ಅಕ್ಕಿ ಕಾಳಿನಲ್ಲಿ ನಾಡಗೀತೆ; ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದ ದಕ್ಷಿಣ‌ ಕನ್ನಡದ ಯುವಕ

ದಕ್ಷಿಣ ಕನ್ನಡ: ಸುಬ್ರಹ್ಮಣ್ಯದ ಕಲಾವಿದ ಮೈಕ್ರೊ ಪರಮೇಶ್ ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆಯುವ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್‌ ಸೇರಿದ್ದಾರೆ. ನಾಡಗೀತೆ ಬರೆಯಲು 136 ಅಕ್ಕಿ ಕಾಳು ಹಾಗೂ 2 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ, ಕಡಿಮೆ ಅಕ್ಕಿ ಕಾಳುಗಳನ್ನು ಬಳಸಿಕೊಂಡು ಈ ದಾಖಲೆ ಮಾಡಿರುವುದು ಅವರ ಸಾಧನೆಯಾಗಿದೆ.

ಇಂಡಿಯಾ ಬುಕ್ ಆಪ್ ರೆಕಾರ್ಡ್‌ ಸಂಸ್ಥೆಯುವರು ಇತ್ತೀಚೆಗೆ ಕುಕ್ಕೆಗೆ ಬಂದು ಪರಮೇಶ ಅವರ ಸಾಧನೆಯನ್ನು ವೀಡಿಯೊ ದಾಖಲೆ ಮಾಡಿಕೊಂಡು ಹೋಗಿದ್ದರು. ಗುರುವಾರ ಸಂಸ್ಥೆಯು ಪ್ರಮಾಣ ಪತ್ರವನ್ನು ಹಸ್ತಾಂತರಿಸಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಪರಮೇಶ್ ಮೂಲತಃ ಹಾವೇರಿಯವರು. ಅಕ್ಕಿ ಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

‘ಗಿನ್ನೆಸ್‌ ದಾಖಲೆ ಮಾಡುವತ್ತ ಗಮನ ಹರಿಸಿದ್ದೇನೆ’ ಎಂದು ಸಾಧಕ ಮೈಕ್ರೋ ಪರಮೇಶ್ ಹೇಳಿದರು.

Related Articles

Latest Articles