ಪೊಲೀಸ್ ಠಾಣೆಯ ಸಮೀಪವೇ ವಕೀಲನಿಗೆ ಚಾಕು ಇರಿದ ಅಮಾನುಷ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ. ವಕೀಲ ಮಂಜುನಾಥ್ ಎಂಬುವವರ ಬೆನ್ನು, ಕೈಗೆ ಮೂರು ಬಾರಿ ಚಾಕುವಿನಿಂದ ಇರಿಯಲಾಗಿದೆ.
ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ವಕೀಲ ಮಂಜುನಾಥ್ಗೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಈ ಕುರಿತು ಪೊಲೀಸ್ ತನಿಖೆ ಬಳಿಕ ನಿಜಾಂಶ ತಿಳಿದುಬರಬೇಕಿದೆ.