Wednesday, November 6, 2024

ಉಗ್ರರ ದಾಳಿಯಲ್ಲಿ ಐವರು ಭಾರತೀಯ ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಟುವಾ ಜಿಲ್ಲೆಯಲ್ಲಿ ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ರು. ಉಗ್ರರು ನಡೆಸಿದ ದಾಳಿಯಲ್ಲಿ ಐವರು ಭಾರತೀಯ ಸೇನೆಯ ಯೋಧರು ಹುತಾತ್ಮರಾಗಿದ್ದಾರೆ.

ಇನ್ನು, ಕಳೆದ 2 ದಿನಗಳಲ್ಲಿ ನಡೆದ 2ನೇ ಉಗ್ರ ದಾಳಿ ಇದಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಉಗ್ರರು ಹತರಾಗಿದ್ದರು. ಇದಾದ 24 ಗಂಟೆಗಳ ನಂತರ ದಾಳಿ ನಡೆದಿದೆ. ಉಗ್ರರು ಮತ್ತು ಭಾರತೀಯ ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಇದುವರೆಗೂ ಐವರು ಯೋಧರು ಜೀವ ತೆತ್ತಿದ್ದಾರೆ.

ಸುದೀರ್ಘ ಗುಂಡಿನ ಚಕಮಕಿ ನಂತರ ನಾಲ್ವರು ಭಯೋತ್ಪಾದಕರ ಶವಗಳನ್ನು ಡ್ರೋನ್ ದೃಶ್ಯಾವಳಿಗಳು ಬಹಿರಂಗಪಡಿಸಿವೆ. ಈ ಹೋರಾಟದಲ್ಲಿ ಹಲವು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Related Articles

Latest Articles