ಭಕ್ತಿಗೀತೆಗಳ ಮೂಲಕವೇ ಜನಮನ್ನಣೆ ಗಳಿಸಿರುವ ಸೂರ್ಯಗಾಯತ್ರಿ ಈಗ ಕಟೀಲು ದುರ್ಗಾಪರಮೇಶ್ವರೀ ದೇವಿಯ ತುಳು ಭಕ್ತಿಗೀತೆ ಹಾಡಿದ್ದು, ಗಮನ ಸೆಳೆಯುತ್ತಿದೆ. ಯ್ಯೂಟ್ಯೂಬ್‌ನಲ್ಲಿ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದುಬೈನಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ವೃಂದ ಆಯೋಜಿಸಿದ ವಿಂಶತಿ ಭಜನಾಟ್ಯ ಸಂಭ್ರಮ 2025ರ ಕಾರ್ಯಕ್ರಮದಲ್ಲಿ ಕಟೀಲ ದೇವಿಯ ತುಳು ಭಕ್ತಿಗೀತೆ ಹಾಡಿದ್ದಾರೆ ಸೂರ್ಯಗಾಯತ್ರಿ.