Thursday, November 14, 2024

‘ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ’- ಚಿತ್ರಾಲ್ ಬಳಿಕ ಸೋನು ಗೌಡ ಕೊಟ್ರು ಹೊಸ ಟ್ವಿಸ್ಟ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದರ ಮಧ್ಯೆ ನೆಚ್ಚಿನ ನಟ ಜೈಲು ಸೇರಿದ ಹಿನ್ನೆಲೆಯಲ್ಲಿ ಮಾಜಿ ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿ ಸೋನು ಗೌಡ ಬೇಸರ ಹೊರ ಹಾಕಿದ್ದಾರೆ. ಜೊತೆಗೆ ಆ ಅಕೌಂಟ್​ನಿಂದ ನನಗೂ ಕೆಟ್ಟದಾಗಿ ಮೆಸೇಜ್ ಬಂದಿದೆ ಅಂತ ಯ್ಯೂಟೂಬ್​ ಚಾನೆಲ್​ನಲ್ಲಿ ಬೇಸರ ಹೊರ ಹಾಕಿದ್ದಾರೆ.

ಕನ್ನಡದ ಬಿಗ್​ ರಿಯಾಲಿಟಿ ಬಿಗ್​ಬಾಸ್​ ಒಟಿಟಿ ಸೀಸನ್ 1ಕ್ಕೆ ಎಂಟ್ರಿ ಕೊಟ್ಟಿದ್ದ ಸೋನು ಶ್ರೀನಿವಾಸ ಗೌಡ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಇದೀಗ ನಟ ದರ್ಶನ್​ ಜೈಲಿಗೆ ಹೋದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಅಂತ ಹೇಳಿಕೊಂಡಿದ್ದಾರೆ.

ಯ್ಯೂಟೂಬ್​ನಲ್ಲಿ ನಾನು ಒಂದು ವಿಡಿಯೋ ನೋಡಿದೆ. ಅದೇ ಅಕೌಂಟ್​ನಿಂದ ಸಾಕಷ್ಟು ಹುಡುಗಿಯರಿಗೆ ಈತ ಕೆಟ್ಟ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ಹಾಗಾಗಿ ನಾನೂ ನನ್ನ ಫೋನ್​ನಲ್ಲಿ ಚೆಕ್​ ಮಾಡಿದೆ. ಆಗ ಆ ಯಪ್ಪ ನನಗೂ ಮೆಸೇಜ್​ ಮಾಡಿದ್ದಾರೆ. ಆತ ತಪ್ಪು ಮಾಡಿದ್ದಾನೆ ಅಂತ ಅವರ ಕುಟುಂಬಕ್ಕೆ ನಾನು ಏನು ಹೇಳುತ್ತಿಲ್ಲ. ನನಗೂ ಕೆಟ್ಟದಾಗಿ ಅನೇಕರು ಕಾಮೆಂಟ್ ಮಾಡುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಕಾಮೆಂಟ್ ಮಾಡಿದ್ರೆ ಸುಮ್ಮನೆ ಇರ್ತೀರಾ? ಅವರು ಕೂಡ ಒಳ್ಳೆವರಾಗಿ ಇದಿದ್ದರೇ ದೇವರು ಅವರನ್ನು ಚೆನ್ನಾಗಿ ಇಡುತ್ತಾರೆ ಅಂತ ಹೇಳಿದ್ದಾರೆ.

ಇನ್ನು ನಟಿ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಶೇರ್‌ ಮಾಡಿ ರೇಣುಕಾಸ್ವಾಮಿ ಅವರದ್ದು ಎನ್ನಲಾದ ಅಕೌಂಟ್​ ಫೋಟೋವನ್ನು ಸ್ಟೋರಿಯಲ್ಲಿ ಶೇರ್‌ ಮಾಡಿಕೊಂಡು ಅದರ ಬಗ್ಗೆ ಸವಿವರವಾಗಿ ಮಾತನಾಡಿದ್ದರು.

Related Articles

Latest Articles