ಭಾರತವೇ ಸಾಕಷ್ಟು ವೈವಿಧ್ಯತೆಗಳ ನಾಡು. ವೈವಿಧ್ಯತೆಯಲ್ಲಿ ಏಕತೆ ಎಂಬುವುದು ನಮ್ಮ ಹೆಮ್ಮೆ. ಇಂತಿಷ್ಟು ಕಿ. ಮೀ ದಾಟಿದರೆ ಭಾಷೆ, ಸೊಬಗು, ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರ, ಆಡು ಭಾಷೆ ಪ್ರತಿಯೊಂದು ಕೂಡ ಭಿನ್ನವಾಗಿರುತ್ತದೆ. ಅದರಲ್ಲೂ ತುಳುನಾಡಿನಲ್ಲಿ ಸಾಕಷ್ಟು ವಿವಿಧ ಆಚಾರ ವಿಚಾರಗಳಿವೆ.
ನಾವಿದ್ದ ಪರಿಸರ ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇಲ್ಲಿನ ಆಚಾರ ವಿಚಾರ ಕಲೆ ವೈವಿಧ್ಯ ನಮ್ಮ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಸಾಕಷ್ಟು ಕಲೆಗಳು ನಮ್ಮ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿದೆ. ಆದರೆ ಇಂದು ಸಾಕಷ್ಟು ವಿಷಯಗಳು ಮೂಲೆ ಗುಂಪಾಗಿ ಅಳಿವಿನ ಅಂಚು ತಲುಪಿದೆ. ಆದರೆ ಡಿಜಿಟಲ್ ಯುಗದಲ್ಲಿ ನಮ್ಮ ಶ್ರೀಮಂತ ಪರಂಪರೆಯನ್ನು ಉಳಿಸುವ ಕಾರ್ಯವೂ ಆಗುತ್ತಿದೆ. ಡಿಜಿಟಲ್ ಫ್ಲ್ಯಾಟ್ ಫಾರ್ಮ್‌ಗಳು ಕೆಡುಕು ಇದ್ದರೂ, ಒಳ್ಳೆಯ ಅಂಶಗಳೂ ಇವೆ. ಸಾಕಷ್ಟು ಉತ್ತಮ ಜ್ಞಾನ ಪಡೆಯಲು ಇವುಗಳು ನೆರವಾಗುತ್ತದೆ. ದಾಖಲೀಕರಣಕ್ಕೂ ಇದು ಒಂದು ಉತ್ತಮ ವೇದಿಕೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಶ್ಚತ್ಯ ಸಂಸ್ಕೃತಿ ಎಷ್ಟೇ ಪ್ರಭಾವ ಬೀರಿದ್ದರೂ, ಒಂದಷ್ಟು ವರ್ಗ ನಮ್ಮ ಸಂಸ್ಕೃತಿಯನ್ನು ತಿಳಿದುಕೊಂಡು ಅದನ್ನು ಅನುಕರಿಸುವ ತವಕದಲ್ಲಿದ್ದಾರೆ. ಮದುವೆ ಮನೆಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನ ಕಾಲದಲ್ಲಿ ಮದುವೆ, ನಾಮಕರಣ, ಮದರಂಗಿ ಹೀಗೆ ಶುಭ ಕಾರ್ಯಕ್ರಮದಲ್ಲಿ ಸೋಬಾನೆ ಹಾಡುಗಳನ್ನು ಹಾಡುತ್ತಿದ್ದರು. ಆದರೆ ಇಂದು ಕೇಳುವುದೇ ಅಪರೂಪ ಎಂಬಂತಿದೆ.
ಯ್ಯೂಟ್ಯೂಬರ್ ಆಗಿರುವ ವಿ ಜೆ ವಿಖ್ಯಾತ್ ಅವರ ತಂಡ ಸೋಬಾನೆ ಹಾಡುವ ದಮಯಂತಿ ಅವರ ಸಂದರ್ಶನ ನಡೆಸಿದ್ದಾರೆ. ನೂರಕ್ಕು ಅಧಿಕ “ಸೋಬಾನೆ ಹಾಡುಗಳನ್ನು” 55 ವರ್ಷದ ತಾಯಿಯನ್ನು ಸಂದರ್ಶಿಸಿ ಹಾಡಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.