ಪಟ್ನಾ: ರೈಲಿನ ಎಂಜಿನ್‌ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಲೋಕೋ ಪೈಲಟ್ ಹಾಗೂ ಅವರ ಸಹಾಯಕ ಟ್ರೈನಿನಿಂದ ಇಳಿದು ಹೋದ ಘಟನೆ ಬಿಹಾರದ ತರೆಕ್ನಾ ರೈಲು ನಿಲ್ದಾಣದಲ್ಲಿ ನಡೆದಿದೆ. ಪಟ್ನಾ-ಗಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ರೈಲು ಒಂದು ಗಂಟೆ ತಡವಾಗಿ ನಿಲ್ದಾಣದಿಂದ ಹೊರಟಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಪಲಾಮು ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದ್ದು, ಲೋಕೋ ಪೈಲಟ್ ಸಂಜಯ್ ಕುಮಾರ್ ಹಾಗೂ ಅವರ ಸಹಾಯಕ ಎಂಜಿನ್‌ನಲ್ಲಿ ಹಾವನ್ನು ಕಂಡು ಕೂಡಲೇ ರೈಲನ್ನು ನಿಲ್ಲಿಸಿ ಇಳಿದಿದ್ದಾರೆ. ವಿಚಾರ ತಿಳಿದ ಪ್ರಯಾಣಿಕರು ಕೂಡ ರೈಲಿನಿಂದ ಇಳಿದಿದ್ದಾರೆ.
ಎರಡು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದ್ದು, ಒಂದು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಲೋಕೋ ಪೈಲಟ್ ಸಂಜಯ್ ಅವರ ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅನೇಕರ ಜೀವ ಉಳಿಸಿದ್ದಾರೆ. ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.