Wednesday, February 19, 2025

ಭಾರತದ ಬಳಿಕ ಚಂದ್ರನ ನೆಲದ ಮೇಲೆ ಕಾಲಿಟ್ಟ ಜಪಾನ್‌ನ SLIM

ಭಾರತದ ಚಂದ್ರಯಾನ-3 ಬಳಿಕ ಜಪಾನ್‌ನ ಬಹುನಿರೀಕ್ಷಿತ ಸ್ಲಿಮ್‌ ನೌಕೆ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿದೆ. ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಏಜೆನ್ಸಿ ಅಂದರೆ ಜಾಕ್ಸಾ ಸ್ಲಿಮ್‌ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA) ಸ್ಲಿಮ್‌ ಇಳಿಯಲು ಆರಂಭ ಮಾಡಿದ ನಂತರ 20 ನಿಮಿಷಗಳಲ್ಲಿ ಲ್ಯಾಂಡಿಂಗ್‌ ಪ್ರಯತ್ನವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿತ್ತು. 2023ರ ಸೆಪ್ಟೆಂಬರ್ 6 ರಂದು ಉಡಾವಣೆಯಾಗಿದ್ದ ಸ್ಲಿಮ್‌ ಸಣ್ಣ ಕಾರಿನ ಗಾತ್ರದ ಬಾಹ್ಯಾಕಾಶ ನೌಕೆಯಾಗಿದೆ. 2023ರ ಕ್ರಿಸ್‌ಮನ್‌ ದಿನದಂದು ಈ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಸ್ಲಿಮ್‌ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸುವ ಮೂಲಕ ಚಂದ್ರನ ಮೇಲೆ ಕಾಲಿಟ್ಟಿ ವಿಶ್ವದ ಐದನೇ ದೇಶ ಎನ್ನುವ ಸಾಧನೆ ಮಾಡಿದೆ.

ಜಪಾನ್‌ನ ಸ್ಲಿಮ್‌ ಲ್ಯಾಂಡಿಂಗ್‌ ಹೇಗೆ ಭಿನ್ನವಾಗಿತ್ತು: ಸಾಮಾನ್ಯವಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ಅನ್ನು ಚಂದ್ರನ ಮೇಲ್ಮೈನಿಂದ ಕೆಲವು ಕಿಲೋಮೀಟರ್‌ ದೂರ ಇರುವಾಗಲೇ ಪ್ರಾರಂಭವಾಗುತ್ತದೆ. ಭಾರತ ಸೇರಿದಂತೆ ಚಂದ್ರನ ಮೇಲೆ ಕಾಲಿಟ್ಟ ಎಲ್ಲಾ ದೇಶಗಳು ಕೂಡ ಇದೇ ಮಾದರಿಯನ್ನು ಅನುಸರಿಸಿದ್ದವು.

ಆದರೆ, ತನ್ನ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಜಪಾನ್‌, ಮೊಟ್ಟ ಮೊದಲ ಬಾರಿಗೆ ಪಿನ್‌ ಪಾಯಿಂಟ್‌ ಲೂನಾರ್‌ ಲ್ಯಾಂಡಿಂಗ್‌ಅನ್ನು ಸಾಧಿಸಿದೆ. ಕೇವಲ 100 ಮೀಟರ್‌ ರೇಡಿಯಸ್‌ನಿಂದ ಸ್ಲಿಮ್‌ನ ಲ್ಯಾಂಡಿಂಗ್‌ ಪ್ರಕ್ರಿಯೆ ಆರಂಭ ಮಾಡಿತ್ತು.

Related Articles

Latest Articles