Sunday, November 3, 2024

ಸಿಡಿಲು ಬಡಿದು ವಿದ್ಯಾರ್ಥಿ ದಾರುಣ ಸಾವು

ಬನವಾಸಿ: ಸಿಡಿಲು ಬಡಿದು ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ. ಶಹಿದ್ ಶೇಖ್ ಮೃತಪಟ್ಟ ವಿದ್ಯಾರ್ಥಿ.

ಬನವಾಸಿಯ ಕದಂಬ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸಿಡಿಲಿಗೆ ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತು, ಆದರೆ ದುರಾದೃಷ್ಟವಷಾತ್ ಯಾವುದೇ ಪ್ರಯೋಜನವಾಗಿಲ್ಲ.

ಆಸ್ಪತ್ರೆಗೆ ತಹಶೀಲ್ದಾರ್‌ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Latest Articles