Sunday, November 3, 2024

ಡೆಂಗ್ಯೂಗೆ ಮಹಿಳೆ ಬಲಿ

ಶಿರಸಿ: ಕಳೆದೊಂದು ವಾರದಿಂದ ಡೆಂಗ್ಯುದಿoದ ಬಳಲುತ್ತಿದ್ದ ಮಹಿಳೆಯೊಬ್ಬರು ಅಸುನೀಗಿದ ಘಟನೆ ವರದಿಯಾಗಿದೆ. ಅಕ್ಷಯ ಕೋ ಆಪ್ ಕ್ರೆಡಿಟ್ ಸೊಸೈಟಿಯ ಸಿಬ್ಬಂದಿಯಾದ ವೀಣಾ ಹೊಳೆಗದ್ದೆ ಮೃತಪಟ್ಟ ದುರ್ದೈವಿ.

ಕಳೆದೊಂದು ವಾರದಿಂದ ಮಹಾಮಾರಿ ಡೆಂಗ್ಯುದಿoದ ಬಳಲುತ್ತಿದ್ದ ವೀಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ವೀಣಾ ಅವರು ಒರ್ವ ಪುತ್ರ ಮತ್ತು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ. ಸೊಸೈಟಿಗೆ ಬಂದ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಿದ್ದ ವೀಣಾ ಅವರ ಅಕಾಲಿಕ ನಿಧನಕ್ಕೆ ಸೊಸೈಟಿಯ ಆಡಳಿತ ಮಂಡಳಿ ಸೇರಿದಂತೆ ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದಾರೆ.

Related Articles

Latest Articles