ಮೇಘಸ್ಫೋಟ ಹಾಗೂ ನಂತರ ತೀಸ್ತಾ ನದಿಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಲ್ಲಿ ಇನ್ನು 76 ಜನರು ನಾಪತ್ತೆಯಾಗಿದ್ದಾರೆ.
ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯು ಇಲ್ಲಿಯವರೆಗೂ 40 ಮೃತದೇಹಗಳನ್ನು ಹೊರತೆಗೆದಿದೆ
ಮೇಘಸ್ಫೋಟದಿಂದಾಗಿ ಕಳೆದ ಬುಧವಾರ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಸಿಕ್ಕಿಂನ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 80 ಸಾವಿರ ಜನರು ಬಾಧಿತರಾಗಿದ್ದಾರೆ’ ಎಂದು ಸಿಕ್ಕಿಂನ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು (ಎಸ್‌ಎಸ್‌ಡಿಎಂಎ) ತಿಳಿಸಿದೆ.
ಶೋಧ ಕಾರ್ಯಕ್ಕಾಗಿ ವಿಶೇಷ ರಾಡಾರ್, ಡ್ರೋನ್ ಬಳಸಲಾಗಿದೆ. ಶ್ವಾನದಳದ ನೆರವು ಪಡೆಯಲಾಗಿದೆ. ಇದುವರೆಗೂ 3000 ಜನರನ್ನು ರಕ್ಷಿಸಲಾಗಿದೆ. 6,875 ಜನರು ವಿವಿಧ ಶಿಬಿರಗಳಲ್ಲಿ ರಕ್ಷಣೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.