Monday, October 14, 2024

ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ.. ಸಿದ್ದು 2.O ಸರ್ಕಾರದ ಅಸಲಿ ಲೆಕ್ಕಾಚಾರ ಏನು? ಲೋಕಸಭಾ ಚುನಾವಣೆಗೆ ಹೇಗೆ ಪರಿಣಾಮ ಬೀರಲಿದೆ.?

ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಬಜೆಟ್​​ ಮಂಡನೆಯಲ್ಲಿ ದಾಖಲೆ ಬರೆದ ಸಿದ್ದರಾಮಯ್ಯಗೆ, ಈ ಬಜೆಟ್​​ ಅಧಿವೇಶನ ಹಿಂದಿನಂತಲ್ಲ. ಗ್ಯಾರಂಟಿಗಳ ಮೂಲಕ ರಾಜ್ಯದ ಪ್ರಗತಿ ಜೊತೆಗೆ ಹೆಜ್ಜೆ ಇರಿಸುವ ಬಹುದೊಡ್ಡ ಸವಾಲು ಸಿದ್ಧರಾಮಯ್ಯ ಮುಂದಿದೆ. 10 ದಿನಗಳ ಕಾಲ ನಡೆಯುವ ಜಂಟಿ ಅಧಿವೇಶನ, ಕಾಂಗ್ರೆಸ್​​ನಂತೆ ವಿಪಕ್ಷಗಳು ಎಚ್ಚರಿಕೆ ಹೆಜ್ಜೆ ಇಡುವ ಸವಾಲಿದೆ.

ಲೋಕಸಭೆ ಎಲೆಕ್ಷನ್​​​ ಹೊಸ್ತಿಲಲ್ಲೇ ಮತ್ತೊಂದು ಮಹಾ ಸಂಗ್ರಾಮಕ್ಕೆ ವಿಧಾನಸೌಧ ಸಜ್ಜಾಗ್ತಿದೆ. ಇಂದಿನಿಂದ ಫೆಬ್ರವರಿ 23ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶ ನಡೆಯಲಿದ್ದು ಎಲ್ಲರ ಚಿತ್ತ ನೆಟ್ಟಿದೆ.‌

ಈ ಬಜೆಟ್ ಮುಂದಿನ ಲೋಕಾ ಚುನಾವಣಾ ಸಮರಕ್ಕೂ ಪರಿಣಾಮ ಬೀರಲಿದೆ ಅನ್ನುವುದಂತೂ ನಿಶ್ಚಿತ. ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಅಧಿವೇಶನ ವೇದಿಕೆ ಆಗೋದು ಪಕ್ಕಾ ಆಗಿದೆ. ಲೋಕಸಭಾ ಚುನಾವಣೆಗೆ ಪೂರ್ವತಯಾರಿ ನಡೆಸ್ತಿರುವ ಕಾರಣ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಆಗಲಿದೆ. ರಾಜಕೀಯ ಘಟಾನುಘಟಿಗಳ ಮುಖಾಮುಖಿಗೆ ವಿಧಾನ ಮಂಡಲದ ಬಜೆಟ್ ಅಧಿವೇಶನ ಸಜ್ಜಾಗ್ತಿದೆ.

ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದ ಮೂಲಕ ಆರಂಭವಾಗಲಿದೆ. ರಾಜ್ಯಪಾಲ ಥಾವರ್​​ಚಂದ್ ಗೆಹಲೋತ್ ಇಂದು ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

16ರಂದು ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 15ನೇ ಬಜೆಟ್​​​ನ್ನ ಮಂಡಿಸಲಿದ್ದಾರೆ. ಕೇಂದ್ರ ಅನುದಾನ ದಕ್ಕದ ಕಾರಣ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಪಂಚ ಗ್ಯಾರಂಟಿ ಅನುಷ್ಠಾನದಿಂದ ವಿತ್ತ ಅಸ್ತವ್ಯಸ್ತ ಹೇಗೆ ನಿಭಾಯಿಸ್ತಾರೆ ಅನ್ನೋದು ಪ್ರಶ್ನೆ ಆಗಿದೆ.

Related Articles

Latest Articles