ಶ್ರೀ ಸಾಯಿ ಪರಿವಾರ್ ಸೇವಾ ಟ್ರಸ್ಟ್ (ರಿ.) ತೊಕ್ಕೊಟ್ಟು (ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ) ಇದರ ಆಶ್ರಯದಲ್ಲಿ ಉಳ್ಳಾಲದಲ್ಲಿ ಪ್ರಪ್ರಥಮ ಬಾರಿಗೆ ತ್ರಿವಳಿ ಜಿಲ್ಲಾಮಟ್ಟದ ಕುಣಿತ ಭಜನಾ ಸ್ಪರ್ಧೆ ಸುಗಿತ್ ನಲಿಪುಗ 2024 ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ: 19-5-2024, ಆದಿತ್ಯವಾರದಂದು ಬೆಳಗ್ಗೆ 10.0 ರಿಂದ ಗಟ್ಟಿ ಸಮಾಜ ಭವನ, ಅಂಬಿಕಾರೋಡು, ತೊಕ್ಕೊಟ್ಟು ಇಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.
ಪ್ರಥಮ ಬಹುಮಾನ
ರೂ.15000+ಮಾನಫಲಕ+ ಪ್ರಶಂಸಾಪತ್ರ
ದ್ವಿತೀಯ ಬಹುಮಾನ
ರೂ. 10000+ ಮಾನಫಲಕ+ ಪ್ರಶಂಸಾಪತ್ರ
ತೃತೀಯ ಬಹುಮಾನ
ರೂ.7000+ ಮಾನಫಲಕ+ ಪ್ರಶಂಸಾಪತ್ರ
ಚತುರ್ಥ ಬಹುಮಾನ
ರೂ.5000+ ಮಾನಫಲಕ+ ಪ್ರಶಂಸಾಪತ್ರ
ಭಾಗವಹಿಸಿ ಎಲ್ಲಾ ತಂಡಗಳಿಗೂ ಪ್ರೋತ್ಸಾಹಧನ, ಪ್ರಶಂಸಾ ಪತ್ರ ನೀಡಲಾಗುವುದು.
ಸ್ಪರ್ಧಾ ನಿಯಮಾವಳಿಗಳು
ಸ್ಪರ್ಧೆಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ತ್ರಿವಳಿ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ವ್ಯಾಪ್ತಿಗೆ ಒಳಪಟ್ಟ ಆಸಕ್ತ ತಂಡಗಳು 2024 ಮೇ 15 ತಾರೀಕಿನ ಒಳಗಾಗಿ ಸೂಚಿತ ಸಂಪರ್ಕ ಸಂಖ್ಯೆಗಳ ಮೂಲಕ ತಮ್ಮ ಹೆಸರನ್ನು ಬನೋಂದಾಯಿಸತಕ್ಕದ್ದು.
ಸ್ಪರ್ಧೆಯು 16 ವರ್ಷಗಳಿಗೆ ಮೇಲ್ಪಟ್ಟವರಿಗೆ ಮಾತ್ರ ನಿಗದಿಯಾಗಿದ್ದು ಸಾಯಿಬಾಬರ ಒಂದು ಸ್ತುತಿ ಇದ್ದರೆ ಒಳ್ಳೆಯದು. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿರುವುದಿಲ್ಲ.
ಒಂದು ತಂಡಕ್ಕೆ 15+2 ಕಾಲಾವಕಾಶ.
ಪ್ರತಿ ತಂಡದಲ್ಲಿ ಹಿಮ್ಮೇಳದವರನ್ನು ಹೊರತುಪಡಿಸಿ ಕನಿಷ್ಠ 12 ಮಂದಿ, ಗರಿಷ್ಠ 18 ಮಂದಿ ಸದಸ್ಯರಿರಬೇಕು.
ಹಿಮ್ಮೇಳದಲ್ಲಿ ಹಾರ್ಮೋನಿಯಂ, ತಬಲ ಅಥವಾ ಕಂಜಿರ (ಟಮ್ಕಿ) ಮಾತ್ರ ಬಳಸಿಕೊಳ್ಳಬಹುದು.
ಇದು ಸಾಯಿ ಪರಿವಾರ್ ಸಂಸ್ಥೆಯ ಚೊಚ್ಚಲ ಪ್ರಯತ್ನವಾಗಿರುವ ನಿಟ್ಟಿನಲ್ಲಿ ಒಟ್ಟು ಪ್ರಸ್ತುತಿಯಲ್ಲಿ ಸಾಯಿಬಾಬ. ಉಳಿದಂತೆ ಯಾವುದೇ ಭಾಷೆಯ ಭಜನೆಯನ್ನು ಹಾಡಿ ಕುಣಿಯಬಹುದು. ದಾಸರ ಪದಗಳೇ ಕಡ್ಡಾಯವೇನಲ್ಲ. ಆರಂಭದಲ್ಲಿ ಗಣಪತಿ ಗೀತೆ, ಸಮಾಪನದಲ್ಲಿ ಮಂಗಳಗೀತೆಯನ್ನೂ ಹಾಡಬೇಕಾಗಿಲ್ಲ. ಕುಣಿತದ ವಿನ್ಯಾಸ ಮತ್ತು ಜೋಡಣೆಗಳಲ್ಲಿ ಹೊಸತನಕ್ಕೆ ಆದ್ಯತೆಯಿರುವುದಾದರೂ ಸಾಂಪ್ರದಾಯಿಕತೆಯ ಚೌಕಟ್ಟನ್ನು ಮೀರಿವಂತಿಲ್ಲ.
ಸ್ಥಳದಲ್ಲೇ ಟೋಕನ್ ತೆಗೆಯುವ ಮುಖೇನ ತಂಡ ಸಂಖ್ಯೆ ಮತ್ತು ಕೋಡ್ ಹೆಸರನ್ನು ನೀಡಲಾಗುವುದು
ತೀರ್ಪುಗಾರರ, ಸಂಘಟಕರ ತೀರ್ಮಾನವೇ ಅಂತಿಮ.
ಮೊದಲು ನೊಂದಾಯಿತ 20 ತಂಡಗಳಿಗೆ ಮಾತ್ರ ಅವಕಾಶ.
ಹೆಚ್ಚಿನ ಮಾಹಿತಿಗಾಗಿ
ಡಾ. ಅರುಣ್ ಉಳ್ಳಾಲ್ 9036679437.
ಪ್ರವೀಣ್ ಎಸ್ ಕುಂಪಲ
9845822090.