ಹಾಡುವ ಕೋಗಿಲೆಗಳಿಗೆ ವಯಸ್ಸಿನ ಅಂತರವಿಲ್ಲ. ನ್ಯೂನತೆಗಳನ್ನು ಮೆಟ್ಟಿ ನಿಲ್ಲುವ ಛಲಕ್ಕೆ ಗಾನ ಸರಸ್ವತಿ ಒಲಿಯುತ್ತಾಳೆ. ಯಾವುದೇ ಕಷ್ಟವನ್ನು ಮೆಟ್ಟಿ ನಿಂತು ಸುಶ್ರಾವ್ಯವಾಗಿ ಹಾಡಿ ಜನರ ಮೆಚ್ಚುಗೆ ಗಳಿಸುತ್ತಾರೆ.
ಇತ್ತೀಚಿಗೆ ರಿಯಾಲಿಟಿ ಶೋಗಳು ತೆರೆಯ ಮರೆಯಲ್ಲಿ ಅಡಗಿರುವ ಅದೆಷ್ಟೋ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ. ಇಂಡಿಯನ್ ಐಡಲ್ ಸತತ 13 ಯಶಸ್ವಿ ಸರಣಿಗಳನ್ನು ಪೂರೈಸಿ 14 ಸೀಜನ್‌ನಲ್ಲಿದೆ.
ಈ ಬಾರಿಯೂ ಭಾರತದಾದ್ಯಂತ ಇರುವ ಹಾಡು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದಾರೆ.
ವಿಕಲಚೇತನ ಬಾಲಕಿಯೊಬ್ಬಳು ರಿಯಾಲಿಟಿ ವೇದಿಕೆಯಲ್ಲಿ ಹಾಡಿ ತೀರ್ಪುಗಾರರ ಕಣ್ಣನ್ನು ತೇವವಾಗಿಸಿದ್ದಾರೆ. ಮೇನಕ ಅನ್ನುವ ಅಂಧ ಬಾಲಕಿ ಹಾಡಿಗೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಫಿದಾ ಆಗಿದ್ದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸದ್ಯ ಇದರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.