ಶಿವಮೊಗ್ಗ: ಯುವಕ ಯುವತಿಗೆ ಚಾಕುವಿನಿಂದ ಇರಿದ ಘಟನೆ ಶಿವಪ್ಪ ನಾಯಕ ವೃತ್ತದಲ್ಲಿ ನಡೆದಿದೆ. ಯುವತಿ ಅಂಬಿಕಾ (22) ಚಾಕು ಇರಿತಕ್ಕೊಳಗಾದ ಯುವತಿ. ಚಾಕು ಇರಿದ ಯುವಕ ಚೇತನ್(28).
ಚಾಕು ಇರಿತಕ್ಕೊಳಗಾದ ಯುವತಿಯು ಶಿವಮೊಗ್ಗ ಜಿಲ್ಲೆಯ ಆಡೋನಹಳ್ಳಿ ಗ್ರಾಮದ ನಿವಾಸಿ. ಅದೇ ಊರಿನ ಚೇತನ್ ಮತ್ತು ಅಂಬಿಕಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೀಗೆ ಈ ಇಬ್ಬರು ಮಾತಾಡುತ್ತಿದ್ದಾಗ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಕೋಪಗೊಂಡ ಯುವಕ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಕೂಡಲೇ ಇದನ್ನು ಗಮನಿಸಿ ಸಾರ್ವಜನಿಕರು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಾಕು ಇರಿದ ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಧರ್ಮದೇಟು ತಿಂದ ಯುವಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.