Saturday, January 25, 2025

ಶಿವಶಕ್ತಿ ಪಾಯಿಂಟ್ ಅನ್ನು ಸೆರೆಹಿಡಿದ ನಾಸಾದ ಆರ್ಬಿಟರ್

ಚಂದ್ರಯಾನ-3 ಗಗನನೌಕೆಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಆದ ಸ್ಥಳವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಚಂದ್ರನ ಆರ್ಬಿಟರ್‌(ಎಲ್‌ಆರ್‌ಒ) ಸೆರೆಹಿಡಿದಿದೆ. ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಆ.23ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಆಯಿತು.

ಈ ಸ್ಥಳವನ್ನು ಭಾರತ “ಶಿವಶಕ್ತಿ’ ಎಂದು ನಾಮಕರಣ ಮಾಡಿದೆ. “ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೆ„ ಮೇಲೆ ಲ್ಯಾಂಡ್‌ ಆದ ನಾಲ್ಕು ದಿನಗಳಲ್ಲೇ ಆ ಸ್ಥಳವನ್ನು ನಾಸಾ ಆರ್ಬಿಟರ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ ಸೆರೆಹಿಡಿದಿದೆ. ಅದಕ್ಕೂ ಮುನ್ನ ಚಂದ್ರಯಾನ-3ರ ರಾಕೆಟ್‌ ಅನ್ನು ಕೂಡ ಅದು ಸೆರೆಹಿಡಿದಿದೆ’ ಎಂದು ನಾಸಾ ತಿಳಿಸಿದೆ.

Related Articles

Latest Articles