Tuesday, March 18, 2025

ನನ್ನ ಪತ್ನಿ ಸಂಸದೆ ಆಗುವುದನ್ನು ನೋಡುವ ಆಸೆ ಇದೆ: ನಟ ಶಿವ ರಾಜ್‌ಕುಮಾರ್

ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕೊಟ್ಟರೆ ನನ್ನ ಪತ್ನಿ ಗೀತಾ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯೆ ಆಗಿ ನೋಡುವ ಆಸೆ ಇದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಗೀತಾ ಎಂಪಿ ಆಗುವ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಲಿದ್ದಾರೆ ಎಂದರು.

ನಾನು ರಾಜಕೀಯಕ್ಕೆ ಬರೊಲ್ಲ. ಅದರ ಬಗ್ಗೆ ಆಸಕ್ತಿ ಇಲ್ಲ. ರಾಜಕೀಯದಲ್ಲಿದ್ದುಕೊಂಡು ಜನರ ಸೇವೆ ಮಾಡೋದು ಗೊತ್ತಿಲ್ಲ. ಕಷ್ಟ ಅಂತ ಬಂದವರಿಗೆ ಹಣ ಕೊಟ್ಟು ಕಳುಹಿಸುವೆ. ಆದರೆ ರಾಜಕಾರಣ ಗೊತ್ತಿಲ್ಲ. ಆದರೆ ಗೀತಾ ಅದೇ ಕುಟುಂಬದಿಂದ ಬಂದವರು. ರಾಜಕೀಯ ಅವರಿಗೆ ರಕ್ತದಲ್ಲಿ ಬಂದಿದೆ. ಅವರು ಎಂಪಿ ಆಗಿ ಆಯ್ಕೆಯಾದರೆ ಸಂತೋಷ ಎಂದರು.

ತಮ್ಮ ಮುಂದಿನ ಚಿತ್ರ ‘ಕರಟಕ ಧಮನಕ’ದ ಕಥೆ ಚೆನ್ನಾಗಿದೆ. ಬೇರೆ ಹೆಸರು ಇಡಬಹುದಿತ್ತು. ಆದರೆ ಕಥೆಗಾಗಿ ಅದೇ ಸಿನಿಮಾ ಟೈಟಲ್ ಉಳಿಸಿಕೊಳ್ಳಲಾಗಿದೆ ಎಂದರು.

Related Articles

Latest Articles