Wednesday, November 6, 2024

ವಿಜಯದಶಮಿಯಂದು ಜನಿಸಿದ ಹೆಣ್ಣುಮಗುವಿಗೆ ದೇವಿಯಂತೆ ಅಲಂಕಾರ – ಹೃದಯಸ್ಪರ್ಶಿ ವಿಡಿಯೋ..!

ವಿಜಯದಶಮಿ ಹಬ್ಬದ ದಿನದಂದು ಹುಟ್ಟಿದ ಹೆಣ್ಣು ಮಗುವಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ದಸರಾ ವೇಳೆ ಹುಟ್ಟಿದ ಹೆಣ್ಣು ಮಗುವಿಗೆ ವೈದ್ಯೆಯೊಬ್ಬರು ದುರ್ಗಾಮಾತೆಯ ಅಲಂಕಾರವನ್ನು ಮಾಡಿದ್ದಾರೆ. ವಿಶೇಷ ರೀತಿಯಲ್ಲಿ ಮುದ್ದು ದೇವಿಯನ್ನು ಕುಟುಂಬಸ್ಥರಿಗೆ ಪರಿಚಯಿಸಿದ್ದಾರೆ. ಸದ್ಯ ಈ ಸುಂದರ ದೃಶ್ಯ ಲಕ್ಷಾಂತರ ಮಂದಿಯ ಹೃನ್ಮನ ಗೆದ್ದಿದೆ.

ವಿಜಯ ದಶಮಿಯ ವಿಶೇಷ ದಿನದಂದು ಹುಟ್ಟಿದ ಈ ಮಗುವಿಗೆ ಆಸ್ಪತ್ರೆಯ ವೈದ್ಯೆಯೊಬ್ಬರು ದುರ್ಗಾ ದೇವಿಯಂತೆ ಬಟ್ಟೆ ತೊಡಿಸಿ, ನಂತರ ಮಗುವನ್ನು ಕುಟುಂಬಸ್ಥರ ಕೈಗೆ ಕೊಟ್ಟಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ವಿನೀತಾ ಸಿಂಗ್‌ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ವಿಜಯದಶಮಿಯಂದು ಜನಿಸಿದ ಹೆಣ್ಣು ಮಗುವನ್ನು ದುರ್ಗಾ ದೇವಿಯಂತೆ ಕಂಗೊಳಿಸಿದ ವೈದ್ಯೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವೈದ್ಯೆಯೊಬ್ಬರು ವಿಜಯದಶಮಿಯ ದಿನದಂದು ಜನಿಸಿದ ಮಗುವಿಗೆ ಕೆಂಪು ಬಟ್ಟೆ, ಕುಂಕುಮ, ಕಿರೀಟ ತೊಡಿಸಿ ದುರ್ಗಾ ದೇವಿಯಂತೆ ಸಿಂಗರಿಸಿದ ದೃಶ್ಯವನ್ನು ಕಾಣಬಹುದು. ಹೀಗೆ ದೇವಿಯಂತೆ ಅಲಂಕಾರಗೊಂಡ ಮಗುವನ್ನು ಬಹಳ ವಿಶೇಷ ರೀತಿಯಲ್ಲಿ ಅವರು ಕುಟುಂಬಸ್ಥರಿಗೆ ಪರಿಚಯಿಸಿದ್ದಾರೆ.

Related Articles

Latest Articles