ಮೌಂಟ್ ಸಿಯಾನ್ ಕಾನೂನು ಕಾಲೇಜಿನ ಮಹಿಳಾ ಕಾನೂನು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕೇರಳದ ಡಿವೈಎಫ್ ಐ ಮುಖಂಡ ಜೇಸನ್ ಜೋಸೆಫ್ ಅವರ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಇದನ್ನು ಹೈಕೋರ್ಟ್ ತಿರಸ್ಕರಿಸಿದಾಗ, ಜೇಸನ್ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಮುಖಭಂಗ ಅನುಭವಿಸುವಂತಾಗಿದೆ.
ಕಳೆದ ವರ್ಷ ಡಿಸೆಂಬರ್ 20 ರಂದು ಮೌಂಟ್ ಸಿಯಾನ್ ಕಾನೂನು ಕಾಲೇಜಿನಲ್ಲಿ ಜೇಸನ್ ತನಗೆ ಥಳಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಳು. ಜನವರಿ 9 ರಂದು, ಸಿಪಿಎಂ ಪೆರುನಾಡ್ ಪ್ರದೇಶ ಸಮಿತಿ ಸದಸ್ಯ ಮತ್ತು ಡಿವೈಎಫ್ಐ ಮುಖಂಡ ಜೇಸನ್ ಜೋಸೆಫ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಆದರೆ ಪೊಲೀಸರು ಆತನನ್ನು ಬಂಧಿಸದಿದ್ದಾಗ ಮಹಿಳೆ ಮತ್ತೆ ಜೇಸನ್ ವಿರುದ್ಧ ಧ್ವನಿ ಎತ್ತಿದ್ದರು. ಇದರೊಂದಿಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗೆ ಹಿನ್ನಡೆಯಾಗಿದೆ.