Saturday, June 22, 2024

ಸರಿಗಮಪ ಸೀಸನ್ 20ರ ವಿನ್ನರ್ ಆಗಿ ಹೊರಹೊಮ್ಮಿದ ದರ್ಶನ್ ನಾರಾಯಣ್..! ದಕ್ಷಿಣ ಕನ್ನಡಕ್ಕಿರುವ ನಂಟೇನು ಗೊತ್ತಾ.?

ಸರಿಗಮಪ ಜೀ ಕನ್ನಡ ಪ್ರಸಿದ್ದ ರಿಯಾಲಿಟಿ ಶೋ‌. ಈ ರಿಯಾಲಿಟಿ ಶೋ ಹೆಚ್ಚು ಜನಪ್ರಿಯವಾಗಿದ್ದು ಆ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ವೀಕ್ಷಕರು ಫಿನಾಲೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂದು ಯಾರಾಗ್ತಾರೆ ವಿನ್ನರ್ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸರಿಗಮಪ ಶೋ ವಿನ್ನರ್ ದರ್ಶನ್​ ನಾರಾಯಣ್​ ಆಗಿದ್ದಾರೆ. ಗೆಲುವಿನ ಪಟ್ಟವನ್ನು ಇವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ರಮೇಶ್​​ ಲಮಾಣಿ ಫಸ್ಟ್​ ರನರ್ ಅಪ್ ಆಗಿದ್ದಾರೆ. ಡಾ.ಶ್ರಾವ್ಯಾ ರಾವ್ ಅವರು 2nd ರನ್ನರ್ ಅಪ್ ಆಗಿದ್ದಾರೆ. ಬಹಳ ಜನರ ನಿರೀಕ್ಷೆಗೆ ಇಂದು ಉತ್ತರ ಲಭಿಸಿದೆ. ಅದ್ಭುತ ಪ್ರತಿಭೆಯಿಂದ ಎಲ್ಲರ ಮನಗೆದ್ದು ಸರಿಗಮಪ ಸೀಸನ್ 20ರ ಗೆಲುವಿನ ಕಿರೀಟ ತೊಟ್ಟವರು ದರ್ಶನ್ ನಾರಾಯಣ್ ಅವರಾಗಿದ್ದಾರೆ.

ದಕ್ಷಿಣ ಕನ್ನಡದ ನಂಟು..!
ಹೌದು. ದರ್ಶನ್ ಅವರಿಗೆ ದಕ್ಷಿಣ ಕನ್ನಡದ ನಂಟಿದೆ. ಇವರು ತಮ್ಮ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದಾರೆ‌. ವಿದ್ಯಾರ್ಥಿಯಾಗಿದ್ದಾಗಲೇ ಸಂಗೀತದ ಮೇಲೆ ವಿಶೇಷ ಆಸಕ್ತಿ ಇತ್ತು.

Related Articles

Latest Articles