Tuesday, June 25, 2024

ಸೀರಿಯಲ್‌ನಲ್ಲಿ ಕಾಣಿಸಿಕೊಂಡ ಕಾಂತಾರ‌ ಚೆಲುವೆ..! ಝೀ ಕನ್ನಡದ ಯಾವ ಧಾರಾವಾಹಿಯಲ್ಲಿ ಗೊತ್ತಾ??

ಕಾಂತಾರ ಸಿನಿಮಾ ಮೂಲಕ ಸಪ್ತಮಿ ಗೌಡ ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಮಾಡಿದ್ದ ಪಾತ್ರ ವೈರಲ್ ಆಗಿತ್ತಾದರೂ ದೊಡ್ಡ ಆಫರ್​ಗಳೇನು ಅದರಿಂದ ದೊರಕಿರಲಿಲ್ಲ. ಆದರೆ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ಸಪ್ತಮಿ ಗೌಡ ಅವರಿಗೆ ಅವಕಾಶಗಳ ಸುರಿಮಳೆಯೇ ಆಗುತ್ತಿದೆ. ಈಗಾಗಲೇ ಬಾಲಿವುಡ್​ನ ದಿ ವಾಕ್ಸಿನ್ ವಾರ್ ಎಂಬ ಸಿನಿಮಾದಲ್ಲಿ ನಟಿಸಿರುವ ಸಪ್ತಮಿ ಗೌಡ, ಇದೀಗ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿಯೇ ಅಗ್ರಗಣ್ಯ ಸ್ಥಾನಿಯಾದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿಯಲ್ಲಿ ಸಪ್ತಮಿ ಕಾಣಿಸಿಕೊಳ್ಳಲಿದ್ದಾರೆ.

ಹಿರಿತೆರೆಯಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟರು ಕಿರುತೆರೆಗೆ ಕಾಲಿಡುವುದಿಲ್ಲ. ಬಂದರೂ ಸಹ ಅತಿಥಿಯಾಗಿ ಮಾತ್ರ. ಇದೀಗ ಸಪ್ತಮಿ ಗೌಡ ಸಹ ಅತಿಥಿಯಾಗಿಯೇ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್​ಬಾಸ್​ಗೆ ಸಪ್ತಮಿ ಗೌಡ ಬಂದಿದ್ದರು.

ಇದೀಗ ಮತ್ತೊಮ್ಮೆ ಕಿರುತೆರೆಗೆ ಸಪ್ತಮಿ ಗೌಡ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯೇ ‘ಜೀ ಕನ್ನಡ’ಕ್ಕಾಗಿ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಪ್ತಮಿ ಗೌಡ, ‘ಅಮೃತಧಾರೆ’ ಧಾರಾವಾಹಿಗಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಪ್ರೊಮೋಟರ್ ರೀತಿ ಸಪ್ತಮಿ ಗೌಡ, ಧಾರಾವಾಹಿ ಬಗ್ಗೆ ಕಾಮೆಂಟ್ರಿ ಮಾಡಿದ್ದಾರೆ.

ಸದ್ಯ ಝೀ ಕನ್ನಡ ಫೇಸ್‌ಬುಕ್ ಖಾತೆಯಲ್ಲಿ ಇಂದು ಪ್ರೊಮೊ ಅಪ್ಲೋಡ್ ಆಗಿದ್ದು, ಅದರಲ್ಲಿ ಸಪ್ತಮಿ ಗೌಡ ಅವರನ್ನು ಕಾಣಬಹುದು.‌ಅಷ್ಟು ಮಾತ್ರವಲ್ಲದೆ ಧಾರವಾಹಿಗೂ ಕೂಡ ಇದು ಪ್ರಮುಖ ತಿರುವು‌ ನೀಡಲಿದೆ.

Related Articles

Latest Articles