Friday, July 19, 2024

ಕರ್ನಾಟಕದಲ್ಲಿ ದೇವ ಭಾಷೆ ಮಾತನಾಡುವ ಮತ್ತೊಂದು ಊರಿದು.? ಎಲ್ಲಿದೆ ಗೊತ್ತಾ?

ದೇವರಾಡುವ ಭಾಷೆಯೇ ಸಂಸ್ಕೃತ ಎಂದು ಹೇಳಲಾಗುತ್ತದೆ. ಪುರಾತನವಾದ ಭಾರತೀಯ ಸಂಸ್ಕೃತಿ, ವಿಜ್ಞಾನ, ಸಾಹಿತ್ಯ ಮತ್ತು ತತ್ವಶಾಸ್ತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದ ಭಾಷೆ ಸಂಸ್ಕೃತವಾಗಿದೆ. ಅಲ್ಲದೆ, ಇದು ಹಿಂದೂ, ಬೌದ್ಧ ಮತ್ತು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆ ಕೂಡ ಹೌದು.

ಪ್ರಸ್ತುತ ಸಂಸ್ಕೃತ ಭಾಷೆಯನ್ನು ಮಾತಾನಾಡುವವರ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬಹುದು. ಆದರೆ ಕರ್ನಾಟಕದ ಈ ಗ್ರಾಮದಲ್ಲಿ ಸಂಸ್ಕೃತಕ್ಕೆ ಸಾಕಷ್ಟು ಪ್ರಾಶಸ್ತ್ಯ ನೀಡಿದ್ದು ನಮಗೆಲ್ಲಾ ತಿಳಿದ ವಿಚಾರ.‌ “ಸಂಸ್ಕೃತ ಗ್ರಾಮ” ಎಂದು ಖ್ಯಾತಿ ಹೊಂದಿದ ಶಿವಮೊಗ್ಗದ ಮತ್ತೂರು ಗ್ರಾಮದ ಬಗ್ಗೆ ಕೇಳಿದ್ದೇವೆ.

ಇದನ್ನು ಮಥೂರು ಎಂದು ಕೂಡ ಕರೆಯುತ್ತಾರೆ. ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತವಾದ ಗ್ರಾಮದ ಜನರು ದೇವ ಭಾಷೆಯನ್ನು ಮಾತನಾಡುತ್ತಾರೆ

ಆದರೆ ಇದರ ಹೊರತಾಗಿಯೂ ಕರ್ನಾಟಕದ ಮತ್ತೊಂದು ಗ್ರಾಮದಲ್ಲಿ ಸಂಸ್ಕೃತ ದಿನಂಪ್ರತಿ ಮಾತಾಡುತ್ತಾರೆ. ಹೌದು‌. ಬೆಳಗಾವಿಯ ಅಥಣಿ ತಾಲೂಕಿನ ನಂದೀಶ್ವರ ಗ್ರಾಮ ಈಗ ದೇಶವೇ ತನ್ನತ್ತ ಸೆಳೆಯುವಂತೆ ಮಾಡಿದ ಗ್ರಾಮ. ಹಾಗದರೆ ಇಲ್ಲಿಯ ವಿಶೇಷತೆ ಏನು.‌ ಇಲ್ಲಿದೆ ವಿಡಿಯೋ.

Related Articles

Latest Articles