ಚಿಕ್ಕಮಗಳೂರು : ಹಾವು ಕಡಿದ ಮೇಲೂ 2 ದಿನ ಆರೋಗ್ಯವಾಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ತಾಲೂಕಿನ ಅಂಡುವಾನೆ ಗ್ರಾಮದಲ್ಲಿ ನಡೆದಿದೆ. ಸುಜಾತ (42) ಮೃತ ಮಹಿಳೆ.
ಎರಡು ದಿನಗಳ ಹಿಂದೆ ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಡಿದಿತ್ತು, ಆ ಬಳಿಕ ಪತಿ ವೆಂಕಟೇಶ್ ಗೌಡ ಅವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ನಾನು ಕ್ಷೇಮವಾಗಿದ್ದೇನೆ ಏನೂ ಆಗಿಲ್ಲ ಎಂದು ಮನೆಗೆ ಮರಳಿದ್ದರು.
ಮರುದಿನವೂ ಆಸ್ಪತ್ರೆಗೆ ಹೋಗಿ ಬಿಪಿ, ಶುಗರ್ ಪರೀಕ್ಷೆ ಮಾಡಿಸಿಕೊಂಡಾಗ ಆರೋಗ್ಯವಾಗಿ ಸಾಮಾನ್ಯವಾಗಿದ್ದರು.
ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಸುಸ್ತು ಎಂದು ಆಸ್ಪತ್ರೆಗೆ ಹೋಗಿದ್ದು ಸಾವನ್ನಪ್ಪಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.