ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ.
ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಅವರು ಕೂಡ ಗೆಲ್ಲುವ ಹಾಟ್ ಫೇವರಿಟ್ ಸ್ಫರ್ಧಿಗಳಲ್ಲಿ ಒಬ್ಬರಾಗಿದ್ದು, ಆಟಗಾರರ ಜೊತೆಗಿನ ಕಿರಿಕ್ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ನಿನ್ನೆಯ (ಜನವರಿ 02) ಸಂಚಿಕೆಯಲ್ಲಿ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಆಗಲೇ ಸಂಗೀತಾ ಶೃಂಗೇರಿ ಅವರ ನಿಜವಾದ ಹೆಸರು ರಿವೀಲ್ ಆಗಿದೆ.
ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸಂಗೀತಾ ಪ್ರತಿಸ್ಫರ್ಧಿ ವಿನಯ್ ಜೊತೆ ಹರಹರ ಮಹದೇವದಲ್ಲಿ ನಟಿಸಿ ಹೆಚ್ಚು ಪ್ರಖ್ಯಾತಿ ಪಡೆದಿದ್ದರು. ಕರ್ಮ, A+, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಆದರೆ, ಕಿರುತೆರೆ ಹಾಗೂ ಹಿರಿತೆರೆ ಪ್ರವೇಶಿಸುವ ಮುನ್ನ ಸಂಗೀತಾ ಶೃಂಗೇರಿ ಅವರನ್ನು ಬೇರೊಂದು ಹೆಸರಿನಿಂದ ಕರೆಯಲಾಗುತ್ತಿತ್ತು ಎಂಬುದು ರಿವೀಲ್ ಆಗಿದೆ.
ನಿನ್ನೆ (ಜನವರಿ 02) ಬಿಗ್ಬಾಸ್ ಮನೆಗೆ ಭೇಟಿ ನೀಡಿದ್ದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಳಿ ಸಂಗೀತಾ ತಮ್ಮ ನಿಜವಾದ ಹೆಸರು ಏನೆಂದು ಹೇಳಿದ್ದಾರೆ. ಮನೆಗೆ ಬಂದು ಎಲ್ಲರ ಭವಿಷ್ಯ ಹೇಳ್ತಿರೋ ಸರಸ್ವತಿ ಸ್ವಾಮಿಜಿ, ನಿಮ್ಮ ಹೆಸರೇನೂ ಅಂತ ಕೇಳಿದ್ದರು. ಆಗ ನನ್ನ ಮೂಲ ಹೆಸರು ಶ್ರೀದೇವಿ ಅಂತಲೇ ಇದೆ. ಇಂಡಸ್ಟ್ರಿಗೆ ಬಂದ್ಮೇಲೆ ಸಂಗೀತಾ ಶೃಂಗೇರಿ ಅಂತ ಹೆಸರು ಬದಲಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ.