ಬೆಳ್ತಂಗಡಿ: ನಿರುದ್ಯೋಗಿಗಳಿಗೆ ಹಾಗೂ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಆಶಾಕಿರಣವಾಗಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ ಡಿಟಿಪಿ (ಗ್ರಾಫಿಕ್ ಡಿಸೈನರ್) ಸೆ. 2ರಿಂದ ಅ. 16ರ ವರೆಗೆ, ಕಂಪ್ಯೂಟರ್ ಟ್ಯಾಲಿ (ಅಕೌಂಟಿಂಗ್) ಅ. 18ರಿಂದ ನ. 17ರ ವರೆಗೆ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
18ರಿಂದ 45 ವರ್ಷದೊಳಗಿನ ಕನ್ನಡ ಓದು ಬರಹ ಬಲ್ಲ ಯುವಕರು/ ಯುವತಿಯರು ಅರ್ಜಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.rudsetujire.com, www.rudsetitraining.org) ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ ಸಿದ್ಧವನ, ಉಜಿರೆ-574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಮಾಹಿತಿಗೆ 08256-236404 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.