Wednesday, November 6, 2024

Paris Paralympic: ಭಾರತಕ್ಕೆ ಐದನೇ ಪದಕ; ಕಂಚು ಗೆದ್ದ ರುಬಿನಾ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನ ಮೂರನೇ ದಿನ ಭಾರತಕ್ಕೆ ಐದನೇ ಪದಕ ಲಭಿಸಿದೆ. ಕ್ರೀಡಾಕೂಟದ ಎರಡನೇ ದಿನ 1 ಚಿನ್ನ ಸೇರಿದಂತೆ 4 ಪದಕ ಗೆದ್ದಿದ್ದ ಭಾರತಕ್ಕೆ ಮೂರನೇ ದಿನದಾಟದಲ್ಲಿ ಕಂಚಿನ ಪದಕವನ್ನು ಭೇಟೆಯಾಡಿದೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್​ಹೆಚ್ 1 ಫೈನಲ್​ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾದಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಎಂಟು ಮಹಿಳಾ ಕ್ರೀಡಾಪಟುಗಳ ನಡುವೆ ನಡೆದ ಈ ಫೈನಲ್‌ ಸುತ್ತಿನಲ್ಲಿ ರುಬಿನಾ ಬೆಳ್ಳಿ ಪದಕದ ರೇಸ್​ನಲ್ಲಿದ್ದರು. ಆದರೆ ಕೊನೆಯ ಎರಡು ಶಾಟ್​ಗಳಲ್ಲಿ ಲಯ ಕಳೆದುಕೊಂಡ ಅವರು ಒಟ್ಟು 211.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು.

Related Articles

Latest Articles