Sunday, May 18, 2025

ಉಡಾವಣೆಯಾದ 40 ಸೆಕೆಂಡ್​ನಲ್ಲಿ ನೆಲಕ್ಕೆ ಅಪ್ಪಳಿಸಿದ ರಾಕೆಟ್​.! ಎಲ್ಲಿ ಗೊತ್ತಾ?

ನಾರ್ವೆ: ಉಡಾವಣೆಗೊಂಡ ರಾಕೆಟ್ ಕೇವಲ 40 ಸೆಕೆಂಡ್​ನಲ್ಲಿ ಪತನಗೊಂಡ ಘಟನೆ ನಡೆದಿದೆ. ಯುರೂಪಿಯನ್ ಖಾಸಗಿ ಬಾಹ್ಯಾಕಾಶ ಸಂಸ್ಥೆ (Isar Aerospace) ಅಭಿವೃದ್ಧಿ ಪಡಿಸಿದ ರಾಕೆಟ್ ಉಡ್ಡಯನಗೊಂಡು ಕಡಲಿಗೆ ಅಪ್ಪಳಿಸಿದ ಬಳಿಕ ಭಯಾನಕವಾಗಿ ಸ್ಫೋಟಗೊಂಡಿದೆ. ಈ ಅವಘಡದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಕೆಟ್ ಅನ್ನು Isar Aerospace)ಅಭಿವೃದ್ಧಿಪಡಿಸಿತ್ತು. ಯುರೋಪಿನಿಂದ ಉಪಗ್ರಹ ಉಡಾವಣೆಗಳನ್ನು ತೀವ್ರಗೊಳಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅದು ಟೇಕ್ ಆಫ್ ಆದ ತಕ್ಷಣ ಪತನಗೊಂಡಿದೆ. ಜರ್ಮನ್​ನ ಸ್ಟಾರ್ಟ್ಅಪ್ ಇಸಾರ್ ಏರೋಸ್ಪೇಸ್ ಇದನ್ನು ಆರಂಭಿಕ ಪರೀಕ್ಷೆ ಎಂದು ಕರೆದಿದೆ.

ಸ್ಪೆಕ್ಟ್ರಮ್ ರಾಕೆಟ್ ಯುರೋಪ್​​​ನಿಂದ ಯಶಸ್ವಿ ಉಡಾವಣೆಗೆ ಪ್ರಯತ್ನಿಸಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ವೀಡನ್, ಬ್ರಿಟನ್ ಮತ್ತು ಇತರ ದೇಶಗಳು ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಬಯಕೆ ವ್ಯಕ್ತಪಡಿಸಿವೆ. ರಾಕೆಟ್ ಸ್ಫೋಟದ ಹೊರತಾಗಿಯೂ ಈ ಘಟನೆ ಭವಿಷ್ಯದ ಕಾರ್ಯಾಚರಣೆಗಳಿಗೆ ಉಪಯುಕ್ತವಾಗಬಹುದಾದ ಪ್ರಮುಖ ಡೇಟಾಗಳನ್ನು ಒದಗಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಾರ್ವೆಯ ಆರ್ಕ್ಟಿಕ್ ಆಂಡೋಯಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾದ ಸ್ಪೆಕ್ಟ್ರಮ್ ರಾಕೆಟ್ ಅನ್ನು ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಮೊದಲ ಪರೀಕ್ಷಾರ್ಥ ಹಾರಾಟ ಹಿನ್ನೆಲೆಯಲ್ಲಿ ಯಾವುದೇ ಪೇಲೋಡ್ ಹೊಂದಿರಲಿಲ್ಲ. ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಏನೆಂದರೆ ಸ್ಥಳೀಯ ಜ್ಞಾನವನ್ನು ಬಳಸಿಕೊಂಡು ಉಡಾವಣಾ ವಾಹನ ನಿರ್ಮಾಣ ಮಾಡುವುದಾಗಿದೆ.

Related Articles

Latest Articles