Monday, December 9, 2024

ಸಾಂಬಾರ್​ ವಿಚಾರಕ್ಕೆ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆಗೈದು ಕೊಲೆ

ಸಾಂಬಾರ್​ ವಿಚಾರಕ್ಕೆ ಜಗಳ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಚೆನ್ನೈನ ರೆಸ್ಟೋರೆಂಟ್​​ವೊಂದರಲ್ಲಿ ನಡೆದಿದೆ. ಅರುಣ್​ (30) ಕೊಲೆಯಾದ ವ್ಯಕ್ತಿ.

ಚೆನ್ನೈನ ಪಲ್ಲಾವರಂನ ಪಮ್ಮಲ್​​ ಮುಖ್ಯ ರಸ್ತೆಯಲ್ಲಿರುವ ರೆಸ್ಟೋರೆಂಟ್​ನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಅಡ್ಯಾರ್​​ ಅನಂದ ಭವನ ರೆಸ್ಟೋರೆಂಟ್​ನಲ್ಲಿ ಅರುಣ್​ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದನು. ಇದೇ ರೆಸ್ಟೋರೆಂಟ್​ಗೆ ಶಂಕರ್​ (55) ಮತ್ತು ಆತನ ಮಗ ಬಂದಿದ್ದಾರೆ. ಈ ವೇಳೆ ಆಹಾರ ಪಾರ್ಸೆಲ್​ ಮಾಡಲು ಹೇಳಿದ್ದಾರೆ. ಈ ಸಮಯದಲ್ಲಿ ಅಪ್ಪ-ಮಗ ಹೆಚ್ಚುವರಿ ಸಾಂಬರ್​​ ಕೊಡುವಂತೆ ಕೇಳಿದ್ದಾರೆ.

ಆದರೆ ಹೆಚ್ಚುವರಿ ಸಾಂಬರ್​ ಕೊಡಲು ಆಗೋದಿಲ್ಲ ಎಂದಿದ್ದಕ್ಕೆ ಮತ್ತು ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್​ನ ಭದ್ರತಾ ಸಿಬ್ಬಂದಿಗೆ ಶಂಕರ್​ ಮತ್ತು ಆತನ ಮಗ ಹಲ್ಲೆ ಮಾಡಿದ್ದಾರೆ. ಈ ವೇಳೆ ಅರುಣ್​ ಮಧ್ಯ ಪ್ರವೇಶಿಸಿ ಹಲ್ಲೆ ತಡೆಯಲು ಮುಂದಾಗಿದ್ದಾರೆ.

ಹಲ್ಲೆ ತಡೆಯಲು ಬಂದ ಅರುಣ್​ ಮೇಲೆ ಶಂಕರ್​ ಮತ್ತು ಆತನ ಮಗ ಹಲ್ಲೆ ಮಾಡಿದ್ದಾರೆ. ಪರಿಣಾಮ ಪ್ರಜ್ಞಾಹೀನನಾಗಿ ಅರುಣ್​ ಕೆಳಕ್ಕೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಕ್ರೋಮ್​ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಅತ್ತ ಶಂಕರ್​ ಮತ್ತು ಆತನ ಮಗನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ​.

Related Articles

Latest Articles