ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ A7 ಆರೋಪಿ ಅನು ಅಲಿಯಾಸ್ ಅನುಕುಮಾರ್ ಮನೆಯಲ್ಲಿ ಇನ್ನೊಂದು ದುರಂತ ನಡೆದಿದೆ. ಮಗನ ಬಂಧನದ ಬಳಿಕ ಚಿಂತೆಗೆ ಒಳಾಗಿದ್ದ ಅನುಕುಮಾರ್ ತಂದೆ ಚಂದ್ರಣ್ಣ ಹೃದಯಾಘಾತದಿಂದ ಮೃತರಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ , ಪವಿತ್ರಾ ಗೌಡ ಮುಂತಾದವರ ಜೊತೆ 7ನೇ ಆರೋಪಿಗಾಗಿ ಅನು ಅರೆಸ್ಟ್ ಆಗಿದ್ದಾನೆ. ಇದರಿಂದಾಗಿ ಅವರ ಕುಟುಂಬಕ್ಕೆ ಆಘಾತ ಆಗಿದೆ. ಅದರ ಬೆನ್ನಲ್ಲೇ ಅನು ತಂದೆ ಚಂದ್ರಣ್ಣ ಸಾವು ಸಂಭವಿಸಿದೆ.
ಅನುಕುಮಾರ್ ತಂದೆ ಚಂದ್ರಣ್ಣ ಅವರಿಗೆ 60 ವರ್ಷ ವಯಸ್ಸಾಗಿತ್ತು. ಮಗನ ಬಂಧನದ ಬಳಿಕ ಚಂದ್ರಣ್ಣ ಆಘಾತಕ್ಕೆ ಒಳಗಾಗಿದ್ದರು. ಹೀನಾಯ ಕೃತ್ಯದಲ್ಲಿ ಮಗ ಭಾಗಿ ಆಗಿದ್ದಾನೆ ಎಂಬ ಆರೋಪ ಎದುರಾಗಿದ್ದರಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಚಿತ್ರದುರ್ಗದ ಸಿಹಿನೀರು ಹೊಂಡ ಬಳಿಯಿರುವ ಮನೆಯಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ಕೇವಲ 13 ಜನರನ್ನು ಮಾತ್ರ ಅರೆಸ್ಟ್ ಮಾಡಲಾಗಿತ್ತು. ದರ್ಶನ್, ಪವಿತ್ರಾ ಗೌಡ, ಪವನ್, ವಿನಯ್, ದೀಪಕ್ ಕುಮಾರ್ ಮುಂತಾದವರು ಬಂಧನ ಆಗಿತ್ತು. ನಂತರದಲ್ಲಿ ಇನ್ನೂ ನಾಲ್ಕು ಮಂದಿಯ ಹೆಸರು ಹೊರಬಿತ್ತು. ಆಗ ಅನು ಅಲಿಯಾಸ್ ಅನುಕುಮಾರ್ ಕೂಡ ಈ ಕೃತ್ಯದಲ್ಲಿ ಭಾಗಿ ಆಗಿರುವುದು ಬೆಳಕಿಗೆ ಬಂತು.